ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ.
ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ ಪೂಜೆ ವ್ಯರ್ಥವಾಗುತ್ತದೆ.
ಹಾಗಾಗಿ ಆ ತಪ್ಪುಗಳು ಯಾವುದೆಂದು ತಿಳಿದು ಸರಿಪಡಿಸಿಕೊಳ್ಳಿ.
*ಧನುರ್ಮಾಸದಲ್ಲಿ ಅರಳೀಮರಕ್ಕೆ ಪೂಜೆ ಮಾಡುತ್ತಾರೆ. ಆದರೆ ಇದನ್ನು ಸೂರ್ಯ ಉದಯಿಸುವ ಮೊದಲೇ ಮಾಡಬೇಕು.
*ಧನುರ್ಮಾಸದಲ್ಲಿ ಪೂಜೆ ವ್ರತ ಮಾಡುವವರು ಮಧ್ಯಾಹ್ನದ ವೇಳೆ ನಿದ್ರೆ ಮಾಡಬಾರದು.
*ಧನುರ್ಮಾಸದ ಪೂಜೆ ಮಾಡುವವರು ಮಾಂಸಹಾರ ಸೇವನೆ ಮಾಡಬಾರದು.
*ಸಿಹಿ ಪೊಂಗಲ್ ನೈವೇದ್ಯವನ್ನು ತಪ್ಪದೇ ದೇವರಿಗೆ ಅರ್ಪಿಸಬೇಕು.
*ಕೂದಲು ಬಿಟ್ಟುಕೊಂಡು ದೇವರ ಪೂಜೆ, ವ್ರತ ಮಾಡಬಾರದು.