![](https://kannadadunia.com/wp-content/uploads/2020/12/maxresdefault-10.jpg)
ಮನುಷ್ಯರ ಜೀವನದಲ್ಲಿ ಹಣದ ಸಮಸ್ಯೆ, ಕುಟುಂಬ ಕಲಹ, ಅನಾರೋಗ್ಯ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳು ಒಂದಾದ ಮೇಲೆ ಮತ್ತೊಂದು ಬಂದು ಕಾಡುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ವಿಷ್ಣುಲಕ್ಷ್ಮಿ ಅನುಗ್ರಹ ದೊರೆಯಬೇಕು. ಅದಕ್ಕಾಗಿ ನೀವು ಈ ಧನುರ್ಮಾಸದ ಶುಕ್ರವಾರದಂದು ಲಕ್ಷ್ಮಿ ದೇವಿ ಪೂಜೆಯ ಜೊತೆಗೆ ಈ ಗಿಡದ ಮುಂದೆ ದೀಪ ಬೆಳಗಬೇಕು.
ಧನುರ್ಮಾಸದಲ್ಲಿ ಲಕ್ಷ್ಮಿದೇವಿಯ ಪತಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಧನುರ್ಮಾಸದಲ್ಲಿ ಬರುವ ಶುಕ್ರವಾರ ಲಕ್ಷ್ಮಿದೇವಿಯ ಪ್ರಿಯವಾದ ವಾರವಾಗಿದ್ದರಿಂದ ಈ ದಿನ ವಿಷ್ಣು ಲಕ್ಷ್ಮಿಯನ್ನು ಜೊತೆಯಾಗಿ ಪೂಜಿಸಿದರೆ ಇಬ್ಬರ ಅನುಗ್ರಹ ನಮ್ಮ ಮೇಲಾಗುತ್ತದೆ.
ಹಾಗಾಗಿ ಶುಕ್ರವಾರದಂದು ನಿಮ್ಮ ಪೂಜೆ ಪುನಸ್ಕಾರಗಳು ಮುಗಿದ ಬಳಿಕ ನಿಮ್ಮ ಮನೆಯಲ್ಲಿರುವ ಬಾಳೆಗಿಡದ ಬಳಿ ಹೋಗಿ ಅದರ ಬುಡಕ್ಕೆ ನೀರನ್ನು ಹಾಕಿ ಅದಕ್ಕೆ ಅರಶಿನ ಕುಂಕುಮ, ಅಕ್ಷತೆ ಹಾಕಿ, ಮಣ್ಣಿನ ದೀಪಕ್ಕೆ 6 ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬೇಕು. ಬಾಳೆಗಿಡದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ಇಬ್ಬರು ವಾಸ ಮಾಡುವುದರಿಂದ ಇಬ್ಬರ ಕೃಪೆಯಿಂದ ನಿಮ್ಮ ಜೀವನದ ಸಮಸ್ಯೆಗಳು ದೂರವಾಗಿ ಯಶಸ್ಸು ಲಭಿಸುತ್ತದೆ.