ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ವಿಷ್ಣುವಿನ ಮುಂದೆ ದೀಪ ಬೆಳಗುವಾಗ ದೀಪಕ್ಕೆ ಈ ಒಂದು ವಸ್ತುವನ್ನು ಹಾಕಿದರೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆ. ಇದರಿಂದ ನಿಮ್ಮ ಆರ್ಥಿಕ ಜೀವನ ಉತ್ತಮವಾಗಿರುತ್ತದೆ.
ಈಗ ಧನುರ್ಮಾಸ ಆರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಇಂದು ಗುರುವಾರವಾದ್ದರಿಂದ ಈ ದಿನ ವಿಷ್ಣುವಿನ ಪೂಜೆಯ ಜೊತೆಗೆ ಲಕ್ಷ್ಮಿದೇವಿಯ ಪೂಜೆ ಮಾಡಿ. ಆ ವೇಳೆ ದೇವರ ಮುಂದೆ 2 ದೀಪವನ್ನು ಬೆಳಗಿ ಆ ದೀಪಕ್ಕೆ ಒಂದೊಂದು ಏಲಕ್ಕಿಯನ್ನು ಹಾಕಿ. ಇದರಿಂದ ಲಕ್ಷ್ಮಿಯ ಕೃಪೆ ನಿಮ್ಮ ಮೇಲಾಗಿ ಹಣದ ಸಮಸ್ಯೆ ದೂರವಾಗುತ್ತದೆ.
ಹಾಗೇ ದೀಪ ಆರಿದ ಬಳಿಕ ಆ ಏಲಕ್ಕಿಯನ್ನು ಎಲ್ಲೆಂದರಲ್ಲಿ ಎಸೆಯದೆ ಮರದ ಬುಡಕ್ಕೆ ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ದೋಷ, ಕಷ್ಟಕಾರ್ಪಣ್ಯಗಳು ಕಳೆದು ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಮನೆಯ ಸದಸ್ಯರು ಏಳಿಗೆ ಹೊಂದುತ್ತಾರೆ.