ಇಂದಿನ ಯುಗದಲ್ಲಿ ಶ್ರೀಮಂತರಾಗೋದು ಪ್ರತಿಯೊಬ್ಬನ ಕನಸು. ಅದಕ್ಕಾಗಿ ಕೆಲವರು ದಿನವಿಡಿ ದುಡಿದ್ರೆ ಮತ್ತೆ ಕೆಲವರು ಅನ್ಯ ಮಾರ್ಗವನ್ನು ಅನುಸರಿಸ್ತಾರೆ. ಎಷ್ಟೇ ದುಡಿದ್ರೂ ವಾಸ್ತು ದೋಷವಿದ್ರೆ ಶ್ರೀಮಂತರಾಗುವುದು ಕನಸಾಗಿಯೇ ಉಳಿದು ಬಿಡುತ್ತದೆ. ಫೆಂಗ್ ಶೂಯಿ ಪ್ರಕಾರ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡ್ರೆ ಸುಲಭವಾಗಿ ಧನವಂತರಾಗಬಹುದು.
ನಾಣ್ಯವನ್ನು ಕೆಂಪು ಬಣ್ಣದ ರಿಬ್ಬನ್ ನಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಒಳ ಭಾಗದಲ್ಲಿ ತೂಗುಹಾಕಿ. ಮುಖ್ಯ ದ್ವಾರದ ಹೊರ ಭಾಗದಲ್ಲಿ ಹಾಕಿದ್ರೆ ಮನೆ ಬಾಗಿಲಿನಲ್ಲಿರುವ ಧನ ಮನೆ ಪ್ರವೇಶ ಮಾಡ್ತಿಲ್ಲ ಎಂದರ್ಥ. ಒಳ ಭಾಗದಲ್ಲಿ ತೂಗು ಹಾಕಿದ್ರೆ ಮನೆಯನ್ನು ಈಗಾಗಲೇ ಪ್ರವೇಶ ಮಾಡಿದೆ ಎಂದರ್ಥ.
ಮೂರು ನಾಣ್ಯವನ್ನು ಮಾತ್ರ ತೂಗು ಹಾಕಬೇಕು. ಹೆಚ್ಚಿನ ಹಣ ತೂಗು ಹಾಕುವುದರಿಂದ ಹೆಚ್ಚಿನ ಸಂಪತ್ತು ಮನೆ ಪ್ರವೇಶ ಮಾಡುವುದಿಲ್ಲ. ಐದು ನಾಣ್ಯವನ್ನು ಎಂದೂ ತೂಗು ಹಾಕಬಾರದು. ಇದು ಧನ-ಸಮೃದ್ಧಿಯ ವಿರೋಧ. ತಾಮ್ರದ ನಾಣ್ಯವನ್ನು ಹಾಕಬಹುದು. ಆದ್ರೆ ಚೀನಾದ ಹಳೆ ನಾಣ್ಯವನ್ನು ಹಾಕಿದ್ರೆ ಬಹಳ ಒಳ್ಳೆಯದು.
ಮರೆತೂ ಮನೆಯ ಹಿಂಬಾಗಿಲಿಗೆ ನಾಣ್ಯವನ್ನು ತೂಗುಹಾಕಬೇಡಿ. ಮನೆಯ ಮುಂಭಾಗಿಲಿನ ಒಳ ಭಾಗದಲ್ಲಿ ಮಾತ್ರ ನಾಣ್ಯವನ್ನು ಹಾಕಿ. ಹಿಂದೆ ಹಾಕಿದ್ರೆ ಮನೆ ಪ್ರವೇಶಿಸಿದ ಲಕ್ಷ್ಮಿ ಹಿಂದಿನಿಂದ ಹೊರಗೆ ಹೋಗುತ್ತದೆ. ಹಾಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.
ಮನೆಯ ಪ್ರವೇಶ ದ್ವಾರದ ಹೊರ ಭಾಗದಲ್ಲಿ ಹ್ಯಾಂಗಿಂಗ್ ಗಂಟೆಯನ್ನು ತೂಗುಹಾಕಿ. ಗಂಟೆಯ ಶಬ್ಧ ಸುಖ-ಸಮೃದ್ಧಿ ಪ್ರವೇಶ ಮಾಡುವ ಸಂಕೇತ ನೀಡುತ್ತದೆ. ಮನೆಯ ಮುಖ್ಯ ದ್ವಾರದ ಹೊರ ಭಾಗಕ್ಕೆ ಗಂಟೆ ಹಾಕುವುದರಿಂದ ಧನಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ತುಂಬಾ ಗಂಟೆಯನ್ನು ಕಟ್ಟಬೇಡಿ. ಕೆಂಪು ರಿಬ್ಬನ್ ನಲ್ಲಿ ಕಟ್ಟಿದ ಸಣ್ಣ-ಸಣ್ಣ ಗಂಟೆಗಳು ಶುಭವನ್ನುಂಟು ಮಾಡುತ್ತವೆ.