alex Certify ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ

ಅಮೆರಿಕದ ವಾಣಿಜ್ಯ ಪ್ರತಿನಿಧಿ (ಯುಎಸ್‌ಟಿಆರ್‌) ಕಚೇರಿಯು ದೆಹಲಿಯ ಪಾಲಿಕಾ ಬಜಾರ್ ಅನ್ನು ತನ್ನ ‘ನಟೋರಿಯಸ್ ಮಾರುಕಟ್ಟೆಗಳ ಪಟ್ಟಿʼಯಲ್ಲಿ ಸೇರಿಸಿದ ಬಳಿಕ, ದೇಶದ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯ ವರ್ತಕರಿಂದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನಕಲಿ ಟ್ರೇಡ್‌ಮಾರ್ಕ್ ಅಥವಾ ಹಕ್ಕುಸ್ವಾಮ್ಯ ಕಳ್ಳತನದಲ್ಲಿ ತೊಡಗಿರುವ ಮಾರುಕಟ್ಟೆಗಳನ್ನು ಈ ಪಟ್ಟಿ ಎತ್ತಿ ತೋರಿಸುತ್ತದೆ.

ಪಾಲಿಕಾ ಬಜಾರ್ ಸಂಘಟನೆಯು ಈ ​​ಆರೋಪಗಳನ್ನು ‘ನಕಲಿ’ ಎಂದು ಕರೆದಿದೆ ಮತ್ತು ‘ಪ್ರತಿಷ್ಠಿತ’ ಮತ್ತು ‘ಗ್ರಾಹಕ ಸ್ನೇಹಿ’ ಮಾರುಕಟ್ಟೆಯು ಯುವ ಪೀಳಿಗೆಗೆ ಬೇಕಾದ ಸರಕುಗಳನ್ನು ಪೂರೈಸುತ್ತದೆ ಮತ್ತು ಅವರಿಗೆ ಅಗ್ಗವಾಗಿ ಸ್ಥಳೀಯ ವಸ್ತುಗಳನ್ನು ಒದಗಿಸುತ್ತದೆ ಎಂದಿದೆ.

ಬೆಚ್ಚಿಬೀಳಿಸುವಂತಿದೆ ಈ ಆನ್‌ ಲೈನ್‌ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

“ಯುಎಸ್‌ಟಿಆರ್‌ ಬಿಡುಗಡೆ ಮಾಡಿರುವ ಕುಖ್ಯಾತ ಮಾರುಕಟ್ಟೆ ಪಟ್ಟಿಯಲ್ಲಿ ಪಾಲಿಕಾ ಬಜಾರ್ ಕಾಣಿಸಿಕೊಂಡಿದೆ ಎಂದು ತಿಳಿದು ತುಂಬಾ ನೋವಾಗಿದೆ. ಪಟ್ಟಿಯ ಪ್ರಕಾರ, ಪಾಲಿಕಾ ಬಜಾರ್ ಮಾರುಕಟ್ಟೆಯು ಮೊಬೈಲ್ ಪರಿಕರಗಳು, ಸೌಂದರ್ಯವರ್ಧಕಗಳು, ಕೈಗಡಿಯಾರಗಳಂಥ ವಸ್ತುಗಳ ನಕಲಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ, ನಮ್ಮ ವಿರುದ್ಧ ಹೊರಿಸಲಾದ ಸುಳ್ಳು ಆರೋಪಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ,” ಎಂದು ಪಾಲಿಕಾ ಬಜಾರ್ ಒಕ್ಕೂಟದ ಅಧ್ಯಕ್ಷ ದರ್ಶನ್ ಲಾಲ್ ಕಕ್ಕರ್ ತಿಳಿಸಿದ್ದಾರೆ.

ಭಾರತದ ಜನಪ್ರಿಯ ಇ-ಕಾಮರ್ಸ್ ಜಾಲತಾಣ IndiaMart.com ಮತ್ತು ನವದೆಹಲಿಯ ಪ್ರಸಿದ್ಧ ಪಾಲಿಕಾ ಬಜಾರ್ ಸೇರಿದಂತೆ ನಾಲ್ಕು ಇತರ ಮಾರುಕಟ್ಟೆಗಳು ಈ ಕುಖ್ಯಾತ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಗುರುವಾರ ಬಿಡುಗಡೆಯಾದ 2021ರ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಪ್ರಪಂಚದಾದ್ಯಂತ 42 ಆನ್‌ಲೈನ್ ಮತ್ತು 35 ಭೌತಿಕ ಮಾರುಕಟ್ಟೆಗಳನ್ನು ಗುರುತಿಸಿದ್ದು, ಅವುಗಳಲ್ಲಿ ಟ್ರೇಡ್‌ಮಾರ್ಕ್ ನಕಲಿಕರಣ ಅಥವಾ ಹಕ್ಕುಸ್ವಾಮ್ಯ ಕಳ್ಳತನ ಸುಗಮವಾಗಿ ನಡೆಯುತ್ತಿವೆ ಎಂದು ವರದಿಯಾಗಿದೆ. ಪಟ್ಟಿಯಲ್ಲಿರುವ ದೇಶದ ಇತರ ಮೂರು ಮಾರುಕಟ್ಟೆಗಳೆಂದರೆ ಮುಂಬೈನ ಹೀರಾ ಪನ್ನಾ, ಕೋಲ್ಕತ್ತಾದ ಕಿಡ್ಡರ್‌ಪೋರ್ ಮತ್ತು ದೆಹಲಿಯ ಟ್ಯಾಂಕ್ ರೋಡ್.

ದೆಹಲಿಯ ಈ ಮಾರುಕಟ್ಟೆಯು ಮೊಬೈಲ್ ಪರಿಕರಗಳು, ಸೌಂದರ್ಯವರ್ಧಕಗಳು, ಕೈಗಡಿಯಾರಗಳು ಮತ್ತು ಕನ್ನಡಕಗಳ ನಕಲಿ ಉತ್ಪನ್ನಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ ಎಂದು ವರದಿ ಹೇಳಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಅಗ್ಗದ ಬೆಲೆಯಲ್ಲಿ ಟ್ರೆಂಡಿ ಉತ್ಪನ್ನಗಳನ್ನು ಬಯಸುವವರು ಇಲ್ಲಿನ ಗ್ರಾಹಕರು ಎಂದು ವರದಿಯಾಗಿದೆ. ಈ ಮಾರುಕಟ್ಟೆಯು ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ ಎಂಬುದನ್ನು ಅದು ಗಮನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...