Hero Moto Corp ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. Hero MotoCorp ಪ್ರತಿ ವರ್ಷ ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ದ್ವಿಚಕ್ರ ವಾಹನಗಳ ಕಂಪನಿಗಳು ಯಾವುವು ಅನ್ನೋದನ್ನು ನೋಡೋಣ.
ಹೀರೋ ಮೋಟೋಕಾರ್ಪ್: ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮೋಟೋಕಾರ್ಪ್ ಮುಂಚೂಣಿಯಲ್ಲಿದೆ. Hero MotoCorp ಫೆಬ್ರವರಿ 2023 ರಲ್ಲಿ 3,82,317 ಯುನಿಟ್‌ಗಳನ್ನು ಮಾರಾಟ ಮಾಡಿದೆ, ವಾರ್ಷಿಕ ಶೇ.15.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಫೆಬ್ರವರಿ 2022 ರಲ್ಲಿ, ಹೀರೋ ಮೋಟೋಕಾರ್ಪ್ ದೇಶೀಯ ಮಾರುಕಟ್ಟೆಯಲ್ಲಿ 3,31,462 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ಹೋಂಡಾ: ಫೆಬ್ರವರಿ 2023 ರಲ್ಲಿ 2,27,084 ಯುನಿಟ್‌ಗಳ ಮಾರಾಟದೊಂದಿಗೆ ಹೋಂಡಾ ಎರಡನೇ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಉತ್ಪನ್ನವಾಗಿದೆ.TVS: ಫೆಬ್ರವರಿ 2023 ರಲ್ಲಿ, TVS, ಬಜಾಜ್ ಅನ್ನು ಮೀರಿಸಿ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪನಿ ಎನಿಸಿಕೊಂಡಿದೆ. ಫೆಬ್ರವರಿ 2023 ರಲ್ಲಿ, ಟಿವಿಎಸ್ ದೇಶೀಯ ಮಾರುಕಟ್ಟೆಯಲ್ಲಿ 2,21,402 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಬಜಾಜ್: ಬಜಾಜ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫೆಬ್ರವರಿ 2023 ರಲ್ಲಿ, ಬಜಾಜ್ 1,18,039 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇಕಡಾ 22 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ರಾಯಲ್ ಎನ್‌ಫೀಲ್ಡ್: ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳ ಪೈಕಿ 5ನೇ ಸ್ಥಾನದಲ್ಲಿದೆ. ಫೆಬ್ರವರಿ 2023 ರಲ್ಲಿ, ರಾಯಲ್ ಎನ್‌ಫೀಲ್ಡ್ 64,436 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದರ ಮಾರಾಟದಲ್ಲಿ ವಾರ್ಷಿಕ 23.5 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ.