ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ವರ ದ್ವಿಚಕ್ರ ವಾಹನದಿಂದ ರಸ್ತೆಯಲ್ಲಿ ಬಿದ್ದ ದಂಪತಿಗೆ ಸಕಾಲಕ್ಕೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಸಂಗಮೇಶ್ವರ ಅವರು ಅರಳಿಹಳ್ಳಿ ಗ್ರಾಮದಿಂದ ಹಿಂದಿರುಗುತ್ತಿದ್ದ ವೇಳೆ ರೆಡ್ಡಿ ಕ್ಯಾಂಪ್ ನಿವಾಸಿಗಳಾದ ಯತಿರಾಜುಲು ನಾಯ್ಡು ಮತ್ತು ವಿಜಯಮ್ಮ ದಂಪತಿ ದ್ವಿಚಕ್ರವಾಹನದಿಂದ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ತಕ್ಷಣ ನೆರವಿಗೆ ಧಾವಿಸಿದ ಸಂಗಮೇಶ್ವರ ಅವರನ್ನು ಕೂರಿಸಿ ನೀರು ನೀಡಿದ್ದಾರೆ.
ಮೊದಲ ಬಾರಿಗೆ $30000 ಗೆ ಹರಾಜಾಗಿದ್ದನ್ನು ನಂಬಲೇ ಆಗಿರಲಿಲ್ಲವಂತೆ ಕೊಹ್ಲಿಗೆ…!
ಬಳಿಕ ತಲೆ ಸುತ್ತುತ್ತಿದೆ ಎಂದು ದಂಪತಿ ಹೇಳಿದ ಕಾರಣ ಕೂಡಲೇ ಅವರನ್ನು ತಮ್ಮ ಕಾರಿನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದ ಶಾಸಕ ಸಂಗಮೇಶ್ವರ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ. ಶಾಸಕರ ಈ ಮಾನವೀಯ ನಡೆಗೆ ಈಗ ಪ್ರಶಂಸೆ ವ್ಯಕ್ತವಾಗುತ್ತಿದೆ.