ದ್ರಾಕ್ಷಿ ಹಣ್ಣಿನ ಮಾಸ್ಕ್ ನಿಮ್ಮ ತ್ವಚೆಯ ಮೇಲೆ ಚಮತ್ಕಾರಗಳನ್ನೇ ಸೃಷ್ಟಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಡವೆ, ತ್ವಚೆಯ ಶುಷ್ಕತೆಯನ್ನು ತೆಗೆದುಹಾಕಲು ದ್ರಾಕ್ಷಿ ನೆರವಾಗುತ್ತದೆ.
ತ್ವಚೆ ತೇವಾಂಶವನ್ನು ಕಳೆದುಕೊಂಡು ಡ್ರೈ ಎನಿಸುವಾಗ ದ್ರಾಕ್ಷಿಯಿಂದ ತಯಾರಿಸಿದ ಮಾಸ್ಕ್ಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಮೊಡವೆಗಳನ್ನು ಕಡಿಮೆ ಮಾಡಲು ದ್ರಾಕ್ಷಿ ತುಂಬಾ ಒಳ್ಳೆಯದು.
ಇದರ ಬೀಜಗಳು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ದ್ರಾಕ್ಷಿ ಬೀಜದ ಎಣ್ಣೆ ಮಾಯಿಸ್ಚರೈಸರ್ ಗುಣ ಹೊಂದಿದೆ ಮತ್ತು ತ್ವಚೆಗೆ ವಿಟಮಿನ್ ಸಿ ಮತ್ತು ಇ ಯನ್ನು ಒದಗಿಸುತ್ತದೆ.
ದ್ರಾಕ್ಷಿಯನ್ನು ಮುಖದ ಮೇಲೆ ನೇರವಾಗಿ ಹಿಸುಕಿ ತಿಕ್ಕಬಹುದು. ಇದರಿಂದ ತ್ವಚೆಯ ಸತ್ತ ಕೋಶಗಳು ದೂರವಾಗುತ್ತವೆ. ಇದನ್ನು ಹಚ್ಚಿ ಹದಿನೈದು ನಿಮಿಷದ ಬಳಿಕ ಮುಖ ತೊಳೆಯಿರಿ.
ಎಣ್ಣೆಯುಕ್ತ ತ್ವಚೆ ಹೊಂದಿರುವವರು ಕಪ್ಪು ದ್ರಾಕ್ಷಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಬೇಕು. ಇದಕ್ಕೆ ರೋಸ್ ವಾಟರ್ ನಾಲ್ಕು ಹನಿ ಸೇರಿಸಿ ಮುಖದ ಮೇಲೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಿರಿ.
ಒಣಚರ್ಮದವರು ಕಪ್ಪು ದ್ರಾಕ್ಷಿಗೆ ಅವಕಾಡೊ ತಿರುಳು, ಜೇನುತುಪ್ಪ ಮತ್ತು ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಹದಿನೈದು ನಿಮಿಷಗಳ ಬಳಿಕ ತೊಳೆದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.