ಅನೇಕ ಬಾರಿ ಎಷ್ಟು ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಅದೃಷ್ಟ ಕೈಕೊಟ್ಟಿದೆ. ನನ್ನ ಭಾಗ್ಯ ಸರಿಯಿಲ್ಲವೆಂದು ಜನರು ಮಾತನಾಡಿಕೊಳ್ತಾರೆ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ, ದುರಾದೃಷ್ಟವನ್ನು ಅದೃಷ್ಟವಾಗಿ ಬದಲಿಸುವ ಉಪಾಯ ತಿಳಿದುಕೊಳ್ಳಿ.
ಗ್ರಹಗತಿ ಸರಿಯಾಗಿಲ್ಲದ ವೇಳೆ ದುರಾದೃಷ್ಟ ಕಾಡುತ್ತದೆ. ಗ್ರಹಕ್ಕೆ ಸಂಬಂಧಿಸಿದ ದಾನ, ಧರ್ಮವನ್ನು ಆಗಾಗ ಮಾಡುತ್ತಿರಬೇಕು.
ತಪ್ಪು ದಾರಿಯಲ್ಲಿ ನಡೆಯುವವರಿಂದ ದೂರವಿರಬೇಕು.
ನಿಮ್ಮ ಕುಲದೇವತೆ ಅಥವಾ ದೇವರ ಆಶ್ರಯದಲ್ಲಿಯೇ ಇದ್ದರೆ ದುರ್ಭಾಗ್ಯ ನಿಮ್ಮ ಬಳಿ ಸುಳಿಯುವುದಿಲ್ಲ.
ಅಪರಾಧ ಹಿನ್ನಲೆ ಹೊಂದಿರುವವರ ಮನೆಯಲ್ಲಿ ಆಹಾರ ಸೇವನೆ ಮಾಡಿದ್ರೆ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ. ನಿಮಗೆ ಗೊತ್ತಿಲ್ಲದೆ ತಪ್ಪುಗಳನ್ನು ಮಾಡಲು ಶುರು ಮಾಡುತ್ತೀರಿ.
ಉಚಿತವಾಗಿ ಆಹಾರ ಸಿಕ್ಕಿದೆ ಎಂದು ಬೇಕಾಬಿಟ್ಟಿ ತಿನ್ನುವುದು ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ನಿಧಾನವಾಗಿ ಹದಗೆಡಲು ಶುರುವಾಗುತ್ತದೆ.
ಹಾಗೆಯೇ ಯಾರ ಬಳಿಯೂ ಉಚಿತವಾಗಿ ಯಾವುದೇ ವಸ್ತುವನ್ನು ಪಡೆಯಬೇಡಿ. ಅದಕ್ಕೆ ತಕ್ಕ ಹಣವನ್ನು ನೀಡಿ.
ನೀವು ಧರಿಸುವ ಬಟ್ಟೆ ಕೂಡ ನಿಮ್ಮ ದೌರ್ಭಾಗ್ಯಕ್ಕೆ ಕಾರಣವಾಗುತ್ತದೆ. ಒಳ್ಳೆ ಬಟ್ಟೆಗಳಿದ್ದರೂ ಹರಿದ ಬಟ್ಟೆಗಳನ್ನು ಧರಿಸಬಾರದು.
ಪೂಜೆ, ಪಾಠದ ವೇಳೆ ಕೊಳಕಾದ ಬಟ್ಟೆಯನ್ನು ಧರಿಸುವುದ್ರಿಂದಲೂ ದೌರ್ಭಾಗ್ಯ ನಿಮ್ಮ ಮನೆ ಬಾಗಿಲು ತಟ್ಟುತ್ತದೆ.
ಎಂದೂ ಹಳೆ ಬಟ್ಟೆಯನ್ನು ದಾನ ನೀಡಬೇಡಿ. ಬೇರೆಯವರು ಧರಿಸಿದ ಬಟ್ಟೆಯನ್ನು ನೀವು ಧರಿಸಬೇಡಿ.
ತಂದೆ-ತಾಯಿ, ಹಿರಿಯರನ್ನು ಅವಮಾನ ಮಾಡಿದ್ರೂ ದುರಾದೃಷ್ಟ ಒಲಿಯುತ್ತದೆ. ಯಾವುದೇ ಮಹಿಳೆಯನ್ನು ಅಪ್ಪಿತಪ್ಪಿಯೂ ಅವಮಾನ ಮಾಡಬಾರದು. ಅವಮಾನ ಮಾಡಿದ್ದಲ್ಲಿ ಕೈ ಮುಗಿದು ಕ್ಷಮೆ ಕೇಳಿ.
ಯಾವುದೇ ಸಂಬಂಧಿಯ ವಸ್ತು, ಆಸ್ತಿ, ಹಣವನ್ನು ಇಟ್ಟುಕೊಳ್ಳಬೇಡಿ.
ಅಶ್ವತ್ಥ ಮರ, ಆಲದ ಮರವನ್ನು ಎಂದೂ ಕಡಿಯಬಾರದು.
ಬೆಳಿಗ್ಗೆ ಎದ್ದು ಸ್ನಾನ ಮಾಡಿದ ಮೇಲೆ 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಿ.