ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ ಇರುತ್ತದೆ. ಆದರೆ ಅಕ್ಕಿಯಲ್ಲಿ ತಯಾರಿಸಿದ ದೋಸೆಯಲ್ಲಿ ಕಾರ್ಬ್ಸ್ ಗಳು ಹೆಚ್ಚಿರುತ್ತವೆ. ಅದ್ದರಿಂದ ತೂಕ ಇಳಿಸಲು ಓಟ್ಸ್ ದೋಸೆ ಸಹಕಾರಿಯಾಗಿದೆ.
ಮಸಾಲೆ, ಎಣ್ಣೆ, ತುಪ್ಪ, ಬೆಣ್ಣೆ ಬೆರೆಸದೆ ಇರುವ ದೋಸೆಯನ್ನು ತಯಾರಿಸಿ. ದೋಸೆಯ ಸೇವನೆಯಿಂದ ಸಮ ತೂಕದ ಪೌಷ್ಟಿಕಾಂಶಗಳು ದೇಹಕ್ಕೆ ಸೇರುತ್ತವೆ. ದೋಸೆ ಸುಲಭವಾಗಿ ಜೀರ್ಣವಾಗುವ ಆಹಾರ. ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥಗಳಿಂದ ತಯಾರಿಸಿದ ದೋಸೆ ದೇಹಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
ಇನ್ನು ದೋಸೆ ತಿಂದಾಗ ಹೆಚ್ಚು ಬಾಯಾರಿಕೆಯಾಗುವುದರಿಂದ ದೇಹಕ್ಕೆ ಅಗತ್ಯ ನೀರು ಸಿಗುತ್ತದೆ. ಇನ್ನು ದೋಸೆಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿದ್ದು, ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡುತ್ತದೆ. ಮೂಳೆಗಳು ಬಲಿಷ್ಠವಾಗುತ್ತವೆ.
ದೋಸೆಯನ್ನು ನಾನ್ ಸ್ಟಿಕ್ ಹಂಚಿನಲ್ಲಿ ಎಣ್ಣೆ ಉಪಯೋಗಿಸದೆ ಅಥವಾ ಕಡಿಮೆ ಎಣ್ಣೆ ಉಪಯೋಗಿಸಿ ತಯಾರಿಸುವುದರಿಂದ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆ.