ಇಂಟರ್ನೆಟ್ ನಲ್ಲಿ ತರಹೇವಾರಿ ಖಾದ್ಯಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಪ್ರಯತ್ನಿಸುವಂತಿದ್ದರೆ, ಇನ್ನು ಕೆಲವು ನೋಡಿದ್ರೆ ವಾಕರಿಕೆ ಬರುವಂತಿರುತ್ತದೆ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ ದೋಸೆ ಐಸ್ ಕ್ರೀಮ್ ಖಾದ್ಯದ ವಿಡಿಯೋ ನೋಡಿರುತ್ತೀರಾ..? ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋದ ತಯಾರಕನೊಬ್ಬ ಇಡ್ಲಿ ಐಸ್ ಕ್ರೀಂ ತಯಾರಿಸಿದ್ದಾನೆ.
ಆಹಾರ ಬ್ಲಾಗರ್ ದಿ ಗ್ರೇಟ್ ಇಂಡಿಯನ್ ಎಂಬ ಹೆಸರಿನ ಇನ್ಸ್ಟಾಗ್ರಾಂ ಪುಟದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಖಾದ್ಯವನ್ನು ದೆಹಲಿಯ ಲಜಪತ್ ನಗರದಲ್ಲಿ ಮಾರಾಟ ಮಾಡಲಾಗುತ್ತದೆ. ವಿಡಿಯೋ ನೋಡಿದ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಖಾದ್ಯವನ್ನು ಯಾರು ತಿನ್ನುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದು ಆಹಾರ ಪದಾರ್ಥಗಳ ಪರಂಪರೆಯನ್ನು ಹಾಳುಮಾಡಿದೆ ಎಂದು ಕೆಲವರು ದೂರಿದ್ದಾರೆ.
ಇತ್ತೀಚೆಗೆ, ದೆಹಲಿಯ ರೆಸ್ಟೋರೆಂಟ್ ವೊಂದು ಕೂಡ ಮಸಾಲಾ ದೋಸೆಗೆ ಐಸ್ ಕ್ರೀಂ ಸೇರಿಸಿದೆ. ಆಲೂಗಡ್ಡೆ ಬಾಜಿ ಬದಲಿಗೆ ಐಸ್ ಕ್ರೀಂ ಅನ್ನು ಸೇರಿಸಿ ದೋಸೆಯನ್ನು ರೋಲ್ ಮಾಡಲಾಗಿದೆ.
ಸಿಹಿ ಮತ್ತು ಖಾರದ ಪಾಕಪದ್ಧತಿಯನ್ನು ಮಿಶ್ರಣ ಮಾಡುವಲ್ಲಿ ಜಪಾನೀಸ್ ರೆಸ್ಟೋರೆಂಟ್ ಸರಿಯಾದ ಮಾರ್ಗ ಉಪಯೋಗಿಸಿದೆ. ಇನ್‌ಸ್ಟಾಗ್ರಾಮ್ ಬಳಕೆದಾರ ಜೆಸ್ಸಿ ಒಗುಂಡಿರಾನ್ ಜಪಾನ್ ರೆಸ್ಟೊರೆಂಟ್ ತನ್ನ ಗ್ರಾಹಕರಿಗೆ ಮಿಸೊ ರಾಮೆನ್ ಸೂಪ್ ಅನ್ನು ಮೃದುವಾದ ಐಸ್ ಕ್ರೀಂನೊಂದಿಗೆ ಬಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜಪಾನ್‌ನ ಒಸಾಕಾದಲ್ಲಿರುವ ಫ್ರಾಂಕೆನ್ ಎಂಬ ರೆಸ್ಟೋರೆಂಟ್ ಈ ವಿಶಿಷ್ಟ ಖಾದ್ಯವನ್ನು ಬಡಿಸುತ್ತದೆ. ಅವರು ಚಾಕೊಲೇಟ್ ಮತ್ತು ವೆನಿಲ್ಲಾದೊಂದಿಗೆ ಸುವಾಸನೆಯ ಸಂಪೂರ್ಣ ಐಸ್ ಕ್ರೀಮ್ ಕೋನ್ನೊಂದಿಗೆ ಬಿಸಿಯಾದ ಜಪಾನೀಸ್ ರಾಮೆನ್ ಬೌಲ್ ಅನ್ನು ಬಡಿಸುತ್ತಾರೆ. ಇದು ಪರಿಪೂರ್ಣ ಸಂಯೋಜನೆಯಾಗಿದೆ ಎಂದು ಆಹಾರ ಬ್ಲಾಗರ್ ಹೇಳಿದ್ದಾರೆ.