ಪಿಜ್ಜಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹೊರಗಡೆ ದುಬಾರಿ ಬೆಲೆ ತೆತ್ತು ಇದನ್ನು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ತಿನ್ನಬಹುದು ಹೇಂಗತೀರಾ. ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ದೋಸೆ ಪಿಜ್ಜಾ. ಮಕ್ಕಳೂ ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಾಗ್ರಿಗಳು: ದೋಸೆ ಹಿಟ್ಟು-1 ಬೌಲ್, ಪಿಜ್ಜಾ ಚೀಸ್-1 ಕಪ್ ತುರಿದಿಟ್ಟುಕೊಳ್ಳಿ., ಕ್ಯಾಪ್ಸಿಕಂ-3 ಟೇಬಲ್ ಸ್ಪೂನ್, 2-ಈರುಳ್ಳಿ ಸಣ್ಣಗೆ ಹಚ್ಚಿಟ್ಟುಕೊಳ್ಳಿ, ಕಾಳುಮೆಣಸು ಪುಡಿ-1/2 ಟೀ ಸ್ಪೂನ್, ಟೊಮೆಟೊ ಕೆಚಪ್-4 ಟೇಬಲ್ ಸ್ಪೂನ್, 1 ಟೊಮೆಟೊ-ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, ರುಚಿಗೆ ತಕ್ಕಷ್ಟು ಉಪ್ಪು, ಬೆಣ್ಣೆ-4 ಟೇಬಲ್ ಸ್ಪೂನ್.
ಮಾಡುವ ವಿಧಾನ: ಗ್ಯಾಸ್ ಮೇಲೆ ದೋಸೆ ತವಾ ಇಟ್ಟು ಎರಡು ಸೌಟು ದೋಸೆ ಹಿಟ್ಟು ಹಾಕಿ ಸ್ವಲ್ಪ ದಪ್ಪಕ್ಕೆ ದೋಸೆ ಮಾಡಿಕೊಳ್ಳಿ. ದೋಸೆ ಸ್ವಲ್ಪ ಬೆಂದ ಮೇಲೆ ಅದಕ್ಕೆ ಟೊಮೆಟೊ ಸಾಸ್ ಹಾಕಿ. ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಹಾಕಿ. ನಂತರ ಇದರ ಮೇಲೆ ಚೀಸ್ ಹಾಕಿ. ಹಾಗೇ ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಒಂದು ನಿಮಿಷ ಮುಚ್ಚಳ ಮುಚ್ಚಿ ಇಡಿ. ನಂತರ ಇದರ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಎರಡು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿಕೊಂಡರೆ ರುಚಿಕರವಾದ ಪಿಜ್ಜಾ ರೆಡಿ.