ಪ್ರತಿಯೊಬ್ಬರು ಮನೆಯಲ್ಲಿ ಸದಾ ಸುಖ, ಸಮೃದ್ಧಿ ನೆಲೆಸಲಿ ಎಂದು ಬಯಸ್ತಾರೆ. ಆರ್ಥಿಕ ವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾರೆ. ಆದ್ರೆ ಕೆಲವೊಮ್ಮೆ ಎಷ್ಟೇ ದುಡಿದ್ರು, ಹಣ ಕೈನಲ್ಲಿ ನಿಲ್ಲುವುದಿಲ್ಲ. ಕೆಲವೊಂದು ನಿಯಮಗಳನ್ನು ಜೀವನದಲ್ಲಿ ಪಾಲಿಸುವುದ್ರಿಂದ ಯಾವುದೇ ಆರ್ಥಿಕ ನಷ್ಟ ಸಂಭವಿಸುವುದಿಲ್ಲ.
ಅನೇಕರು ಪರ್ಸ್ ನಲ್ಲಿ ಮಾತ್ರೆಗಳನ್ನು ಇಟ್ಟುಕೊಂಡಿರುತ್ತಾರೆ. ಅಗತ್ಯ ಬಿದ್ದಾಗ ಬೇಕೆಂಬ ಕಾರಣಕ್ಕೆ ಜನರು, ಮಾತ್ರೆಗಳನ್ನು ಪರ್ಸ್ ನಲ್ಲಿಟ್ಟುಕೊಂಡಿರುತ್ತಾರೆ. ಆದ್ರೆ ಮಾತ್ರೆಗಳನ್ನು ಪರ್ಸ್ ನಲ್ಲಿಟ್ಟುಕೊಳ್ಳುವುದು ಜೀವನದಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ.
ಮಹಿಳೆಯರು ತಮ್ಮ ಪರ್ಸ್ ನಲ್ಲಿ ತಿಂಡಿಗಳನ್ನು ಇಟ್ಟುಕೊಂಡಿರುತ್ತಾರೆ. ಚಾಕೋಲೇಟ್, ಹಣ್ಣುಗಳು ಮಹಿಳೆಯರ ಪರ್ಸ್ ನಲ್ಲಿರುತ್ತವೆ. ಇದು ಕೂಡ ವಾಸ್ತು ಪ್ರಕಾರ ಶುಭಕರವಲ್ಲ. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
ಅನೇಕರು ತಮ್ಮ ವಸ್ತುಗಳನ್ನು ಅಲ್ಲಿ, ಇಲ್ಲಿ ಹರಡಿರುತ್ತಾರೆ. ಇದು ಕೂಡ ಒಳ್ಳೆಯದಲ್ಲ. ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದರೆ ನಕಾರಾತ್ಮಕ ಶಕ್ತಿ ಮನೆ ಮಾಡುತ್ತದೆ.
ಮನೆಯಲ್ಲಿರುವ ಸಣ್ಣಪುಟ್ಟ ವಿಷ್ಯಗಳಿಗೆ ಮಹತ್ವ ನೀಡಬೇಕು. ನೀರು ಸೋರಿಕೆ ಅಥವಾ ನಲ್ಲಿ ಹಾಳಾಗಿರುವುದು, ಒಡೆದ ಗ್ಲಾಸ್ ಬಳಕೆ ಹೀಗೆ ಅನೇಕ ಸಣ್ಣ ಸಂಗತಿಗಳು ಸಮಸ್ಯೆಗೆ ಕಾರಣವಾಗುತ್ತವೆ.
ಸೂರ್ಯನ ಕಿರಣ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಸೂರ್ಯನ ಕಿರಣ ಮನೆಯೊಳಗೆ ಪ್ರವೇಶ ಮಾಡಬೇಕು. ಮನೆಯೊಳಗೆ ಸೂರ್ಯನ ಕಿರಣ ಪ್ರವೇಶ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಕತ್ತಲೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.