alex Certify ದೊಡ್ಡ ಸಮಸ್ಯೆಗೂ ರಾಮಬಾಣ ಕಾಳು ಮೆಣಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಸಮಸ್ಯೆಗೂ ರಾಮಬಾಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ.

ಶೀತ-ನೆಗಡಿ : 2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ.

ಕಣ್ಣಿನ ಸಮಸ್ಯೆ : ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

ರಕ್ತಸ್ರಾವ : ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.

ಹೊಟ್ಟೆ ಸಮಸ್ಯೆ : ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಳ್ಳೆಯದು.

ಎಸಿಡಿಟಿ : ಹೊಟ್ಟೆ ಉಬ್ಬರ, ಹುಳಿ ತೇಗು, ಗಂಟಲು ಸೋಂಕಿದ್ದಲ್ಲಿ ಕಾಳು ಮೆಣಸಿನ ಪುಡಿಗೆ ನಿಂಬೆ ರಸ, 1/2 ಚಮಚ ಉಪ್ಪನ್ನು ನೀರಿಗೆ ಸೇರಿಸಿ ಕುಡಿಯುವುದ್ರಿಂದ ಎಸಿಡಿಟಿ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...