ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ದೇಹದಲ್ಲಿ ಬೆಳೆಯುತ್ತಿದೆ. ಇದನ್ನು ಕರಗಿಸುವುದು ಒಂದು ಸವಾಲೇ ಸರಿ.
ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ ನಾವು ಬೊಜ್ಜನ್ನು ಕರಗಿಸಬಹುದು. ನಾರಿನಾಂಶ ಇರುವ ಆಹಾರಗಳಿಂದ ಇದು ಸಾಧ್ಯ. ನಾರಿನಾಂಶ ಇರುವ ಆಹಾರಗಳ ಸೇವನೆಯಿಂದ ಸುಮಾರು ಹೊತ್ತು ಹಸಿವಿಲ್ಲದಂತಾಗುತ್ತದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ಆಗುವುದರಿಂದ ಮತ್ತೆ ಮತ್ತೆ ತಿನ್ನುವುದು ಕಡಿಮೆಯಾಗುತ್ತದೆ. ಇದು ದೇಹ ತೂಕ ಇಳಿಕೆಗೆ ಕಾರಣವಾಗುತ್ತದೆ.
ಕಿತ್ತಳೆಯಲ್ಲಿ ನಾರಿನಾಂಶ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇದರ ಸೇವನೆ ಉತ್ತಮ.
ಸೇಬಿನಂತೆ ಪಿಯರ್ಸ್ ಹಣ್ಣಿನಲ್ಲಿ ನಾರಿನಾಂಶ ಸಾಕಷ್ಟಿದೆ. ಇದರಲ್ಲಿರುವ ಕ್ಯಾಲೊರಿಯೂ ಬಲು ಕಡಿಮೆ. ಅದರಂತೆ ಬಾಳೆ ಹಣ್ಣು ಕೂಡ ತೂಕ ಇಳಿಸಲು ನೆರವಾಗುತ್ತದೆ.
ಸೀಬೆ ಹಣ್ಣು ಅಥವಾ ಪೇರಳೆಯ ಸೇವನೆಯಿಂದ ದೇಹ ತೂಕವನ್ನು ಸ್ಥಿರವಾಗಿ ಇಡಬಹುದು.