ಪನ್ನೀರ್ ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ. ಸರಿಯಾದ ಕ್ರಮದಲ್ಲಿ ಸೇವಿಸಿದಲ್ಲಿ ತೂಕ ಇಳಿಸಿಕೊಳ್ಳಬಹುದು, ಪನ್ನೀರನಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದೆ. ತೂಕ ಇಳಿಸಿಕೊಳ್ಳಲು ಇದನ್ನು ಆಹಾರ ಕ್ರಮಗಳಲ್ಲಿ ಸೇರಿಸಬಹುದು.
ಆರೋಗ್ಯಕರ ಕೊಬ್ಬು ಹೊಂದಿರುವ ಪನ್ನೀರ್ ದೇಹದ ತೂಕ ಇಳಿಸಿಕೊಳ್ಳಲು ಅತಿಮುಖ್ಯ. ಪನ್ನೀರ್ ತಿಂದರೆ ಹೊಟ್ಟೆ ತುಂಬಿದ ಹಾಗೇ ಆಗುತ್ತದೆ. ಇದು ನಮ್ಮ ಹಸಿವನ್ನು ಕಡಿಮೆ ಮಾಡುತ್ತದೆ.
ಪನ್ನೀರ್ ಸಲಾಡ್ ಮತ್ತು ಗ್ರಿಲ್ ಮಾಡಿದ ಪನ್ನೀರ್ ನ್ನು ನಾವು ಬೀಜಗಳು ಮತ್ತು ಧಾನ್ಯಗಳ ಜೊತೆ ಸೇರಿಸಿ ತಿನ್ನಬಹುದು. ತಯಾರಿಸುವಾಗ ಯಾವುದೇ ಎಣ್ಣೆ ಅಥವಾ ಬೆಣ್ಣೆಯನ್ನು ಬಳಸಬಾರದು. ತೂಕ ಇಳಿಸಲು ಬಯಸಿದಾಗ ನಾವು ಪನ್ನೀರ್ ಟಿಕ್ಕಾ ಅಥವಾ ಪನ್ನೀರ್ ಬಟರ್ ಮಸಾಲದಂತಹ ಖಾದ್ಯಗಳಿಂದ ದೂರವಿರಬೇಕು.