ನಿಮ್ಮ ದೇಹ ತೂಕವನ್ನು ಇಳಿಸಿ ಆಕರ್ಷಕ ಲುಕ್ ಕೊಡುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ.
ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಇವು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತವೆ. ಇವನ್ನು ಕುಡಿಯುವ ಜೊತೆಗೆ ವ್ಯಾಯಾಮವನ್ನೂ ಮಾಡುವುದರಿಂದ ದೇಹತೂಕವನ್ನು ಬಹುಬೇಗ ಕಡಿಮೆ ಮಾಡಿಕೊಳ್ಳಬಹುದು.
ಕಾಫಿ ಕುಡಿಯುವವರು ಹಾಲು ಬೆರೆಸದ ಕಾಫಿ ಕುಡಿಯುವುದು ಬಹಳ ಒಳ್ಳೆಯದು. ಇದು ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿದಷ್ಟು ದೇಹದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ದೇಹದ ತೂಕವೂ ಇಳಿಯುತ್ತದೆ.
ಶುಂಠಿಯನ್ನು ಚಹಾ ರೂಪದಲ್ಲಿ ಸೇವಿಸುವುದರಿಂದ ನಿಮ್ಮ ರಕ್ತದ ಸಕ್ಕರೆ ಪ್ರಮಾಣ ಕಡಿಮೆಯಾಗಿ ಕೆಟ್ಟ ಕೊಲೆಸ್ಟ್ರಾಲ್ ದೂರವಾಗುತ್ತದೆ. ಹೃದಯಕ್ಕೆ ಹಾನಿಯಾಗುವುದೂ ಇದರಿಂದ ತಪ್ಪುತ್ತದೆ.
ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ಕುಡಿಯುವುದರಿಂದ ದೇಹದ ಕೊಲೆಸ್ಟ್ರಾಲ್ ಕರಗುತ್ತದೆ. ಸದಾ ಹೊಟ್ಟೆ ತುಂಬಿದ ಅನುಭವ ಆಗುವುದರಿಂದ ಕಡಿಮೆ ಆಹಾರವನ್ನು ಸೇವಿಸುತ್ತೇವೆ. ನೀರಿಗೆ ಸೋಂಪು ಹಾಕಿ ಕುಡಿಯುವುದರಿಂದಲೂ ಇದೇ ಪರಿಣಾಮ ಪಡೆಯಬಹುದು.