
ಆಧುನಿಕ ಜೀವನ ಶೈಲಿಯಿಂದಾಗಿ ಮತ್ತು ಹವ್ಯಾಸಗಳಿಂದಾಗಿ ದೇಹದ ತೂಕ ಹೆಚ್ಚುತ್ತಿದೆ. ಕೆಲವರಿಗೆ ಅನುವಂಶೀಯವಾಗಿ ಬೊಜ್ಜಿನ ಸಮಸ್ಯೆಯೂ ಕಾಡುವುದುಂಟು.
ಒಂದು ಲೋಟ ನೀರಿಗೆ ಚಕ್ಕೆಯ ಪುಡಿ, ಶುಂಠಿಯನ್ನು ಕತ್ತರಿಸಿ ಹಾಕಿ ಕುದಿಸಿ. ಒಂದು ಲೋಟ ನೀರು ಅರ್ಧ ಲೋಟ ಆಗುವವರೆಗೂ ಚೆನ್ನಾಗಿ ಕುದಿಯಲಿ. ನೀರು ತಣ್ಣಗಾದ ನಂತರ ನಿಂಬೆ ರಸವನ್ನು ಮಿಕ್ಸ್ ಮಾಡಿ.
ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಇರುವ ಕಲುಷಿತ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಈ ಪಾನೀಯವನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಮುಖ್ಯವಾದ ಸಂಗತಿ ಎಂದರೆ ಈ ಪಾನೀಯವನ್ನು ಕುಡಿದ ನಂತರ ಅರ್ಧ ಅಥವಾ ಒಂದು ಗಂಟೆವರೆಗೆ ಬೇರೆ ಯಾವುದೇ ಆಹಾರವನ್ನು ಸೇವಿಸಬಾರದು. ಟೀ ಮತ್ತು ಕಾಫೀ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ ಅದನ್ನೂ ಬಿಟ್ಟು ಬಿಡಿ. ಪ್ರತಿನಿತ್ಯ ಡಯೆಟ್ ನಲ್ಲಿ ಸೇರಿಸಿ ಕುಡಿಯಿರಿ. ಇದರಿಂದ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.