ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ.
ಬೆಳಗೆದ್ದು ಅರ್ಧ ಗಂಟೆ ಹೊತ್ತು ವಾಕಿಂಗ್ ಹೋಗುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು. ಡಯಾಬಿಟಿಸ್, ಬಿಪಿ ಮೊದಲಾದ ರೋಗಗಳನ್ನು ನಿಯಂತ್ರಣದಲ್ಲಿಡಬಹುದು.
ದಿನನಿತ್ಯ ವಾಕಿಂಗ್ ಹೋಗುವುದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ದೊರೆಯುತ್ತದೆ. ಇಡೀ ದಿನ ನೀವು ಕ್ರಿಯಾಶೀಲರಾಗಿ ಇರಬಹುದು.
ಬೆಳಗಿನ ಗಾಳಿ ದೇಹಕ್ಕೆ ಚೈತನ್ಯ, ಮನಸ್ಸಿಗೆ ಮುದ ನೀಡುತ್ತದೆ. ಆಲಸ್ಯವನ್ನು ಹೋಗಲಾಡಿಸಿ ಹುರುಪು ನೀಡುತ್ತದೆ. ವಯಸ್ಸಿನ ಹಂಗು ತೊರೆದು ಪ್ರತಿಯೊಬ್ಬರೂ ವಾಕಿಂಗ್ ಮಾಡಿ ನೆಮ್ಮದಿ ಪಡೆಯಿರಿ.