ಬೇಸಿಗೆಯಲ್ಲಿ ಮೈ ಬೆವರು ಜಾಸ್ತಿ. ಬೆವರಿನ ವಾಸನೆ ಅಕ್ಕಪಕ್ಕದವರಿಗೆ ಕಿರಿಕಿರಿಯನ್ನುಂಟು ಮಾಡುತ್ತೆ. ಹಾಗಾಗಿ ಡಿಯೋಡರೆಂಟ್ ಮೊರೆ ಹೋಗ್ತಾರೆ ಜನರು. ಕೆಲವೊಮ್ಮೆ ಡಿಯೋಡರೆಂಟ್ ಖಾಲಿಯಾಗಿರುತ್ತೆ. ಅಂದೇ ಪಾರ್ಟಿಗೆ ಹೋಗುವ ಸಂದರ್ಭ ಬರುತ್ತೆ. ಆಗ ಚಿಂತೆ ಪಡಬೇಕಾಗಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು.
ಕೆಲವರಿಗೆ ಡಿಯೋ ವಾಸನೆ ಅಲರ್ಜಿಗೆ ಕಾರಣವಾಗುತ್ತದೆ. ತಲೆನೋವು ಬರುವುದುಂಟು. ಅಂತವರು ಮನೆಯಲ್ಲಿರುವ ಪದಾರ್ಥ ಬಳಸಿ ಡಿಯೋ ರೀತಿಯಲ್ಲಿ ಬಳಸಿ ದೇಹದಿಂದ ಬರುವ ದುರ್ಗಂಧವನ್ನು ಹೊಡೆದೋಡಿಸಬಹುದು.
ಪ್ರತಿ ದಿನ ಸ್ನಾನ ಮಾಡುವ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಿಂಬೆ ರಸ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುರ್ಗಂಧ ಕಡಿಮೆಯಾಗಿ ಇಡೀ ದಿನ ನೀವು ಫ್ರೆಶ್ ಆಗಿರುವಂತೆ ಮಾಡುತ್ತದೆ.
ಡಿಯೋ ಬದಲು ನೀವು ಹ್ಯಾಂಡ್ ಸ್ಯಾನಿಟೈಜರ್ ಬಳಸಬಹುದು. ಇದು ದುರ್ಗಂಧವನ್ನುಂಟು ಮಾಡುವ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡುತ್ತದೆ.
ಎರಡು ಚಮಚ ಬೇಕಿಂಗ್ ಸೋಡಾಕ್ಕೆ ಜೋಳದ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಅಂಡರ್ ಆರ್ಮ್ ಗೆ ಹಚ್ಚುವುದರಿಂದಲೂ ದುರ್ಗಂಧ ದೂರವಾಗುತ್ತದೆ.