ಬೇಸಿಗೆಯಲ್ಲಿ ವಿಪರೀತ ಬೆವರು ಮೈ ಅಕ್ಕಪಕ್ಕದವರಿಗೆ ವಾಸನೆ ಬರುವಷ್ಟು ಭೀಕರವಾಗಿರುತ್ತದೆ. ಶಾಲೆಗೆ ತೆರಳುವ ಮಕ್ಕಳ ಮೈಯಂತೂ ಸಂಜೆ ವೇಳೆಗೆ ದುರ್ನಾತ ಬೀರುತ್ತದೆ. ಕಚೇರಿಗೆ ತೆರಳುವವರು ಆಫೀಸಿನಲ್ಲಿ ಮುಜುಗರ ಎದುರಿಸುವ ಸನ್ನಿವೇಶ ಎದುರಾಗುವುದೂ ಉಂಟು. ಕೆಲವರಿಗೆ ಮೈ ವಾಸನೆ ಬರುವುದು ಬಾಲ್ಯದಿಂದಲೇ ಅಂದರೆ ವಂಶವಾಹಿನಿಯಲ್ಲಿ ಬಂದಿರುತ್ತದೆ.
ಇನ್ನು ಕೆಲವರು ವಿಪರೀತ ಮಸಾಲೆ ಪದಾರ್ಥ ಸೇವಿಸುವುದರಿಂದಲೂ ಮೈ ದುರ್ವಾಸನೆ ಬೀರುತ್ತದೆ. ಅದರೆ ಪರಿಹಾರಕ್ಕಾಗಿ ಪರ್ಫ್ಯೂಮ್ ಗಳ ಮೊರೆ ಹೋಗುವುದು ಸಾಮಾನ್ಯ. ಕೆಲವೊಮ್ಮೆ ಪರ್ಫ್ಯೂಮ್ ಗಳು ದೇಹಕ್ಕೆ ಅಲರ್ಜಿಯನ್ನುಂಟು ಮಾಡುತ್ತವೆ. ಅಂಥ ಸಂದರ್ಭದಲ್ಲಿ ದುರ್ಗಂಧ ಹೋಗಲಾಡಿಸಲು ಹೀಗೆ ಮಾಡಿ.
ಲಿಂಬೆ ರಸ ಹಿಂಡಿದ ಬಳಿಕ ಉಳಿದ ತುಂಡಿನಿಂದ ಕಂಕುಳನ್ನು ಐದು ನಿಮಿಷ ಮಸಾಜ್ ಮಾಡಿ, ಬಳಿಕ ಶುದ್ಧ ತೆಂಗಿನೆಣ್ಣೆ ಹಚ್ಚಿ ಸೋಪಿನಿಂದ ತೊಳೆಯಿರಿ. ಹೀಗೆ ಸತತ ಏಳು ದಿನಗಳ ಕಾಲ ಮಾಡುವುದರಿಂದ ಕಂಕುಳ ವಾಸನೆ ಸಮಸ್ಯೆ ದೂರವಾಗುತ್ತದೆ.
ಪ್ರತಿದಿನ ಸ್ನಾನ ಮಾಡುವ ನೀರಿಗೆ ಎರಡು ಹನಿ ನಿಂಬೆರಸ ಬೆರೆಸಿ ಸ್ನಾನ ಮಾಡುವುದರಿಂದಲೂ ದುರ್ಗಂಧ ದೂರವಾಗಿ ನೀವು ಇಡೀ ದಿನ ಫ್ರೆಶ್ ಆಗಿ ಇರಬಹುದು.
ಸ್ಯಾನಿಟೈಸರ್ ಬಳಸುವುದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತವೆ ಮತ್ತು ದುರ್ಗಂಧ ದೂರವಾಗುತ್ತದೆ. ಬೇಕಿಂಗ್ ಸೋಡಾಗೆ ಜೋಳದ ಪುಡಿಯನ್ನು ಬೆರೆಸಿ ಕಂಕುಳು ಹಾಗೂ ಕುತ್ತಿಗೆಯ ಬುಡಭಾಗಕ್ಕೆ ಹಚ್ಚುವುದರಿಂದ ದೇಹದ ವಾಸನೆ ಕಡಿಮೆಯಾಗುತ್ತದೆ.
ಕಹಿಬೇವಿನ ಎಲೆಯನ್ನು ಬಿಸಿನೀರಿನಲ್ಲಿ ಅದ್ದಿಟ್ಟು 30 ನಿಮಿಷಗಳ ಬಳಿಕ ಸ್ನಾನ ಮಾಡುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.