ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ.
ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. ಅದರಲ್ಲಿ ಇರುವ ವಿಟಮಿನ್ ಸಿ ಹಾನಿಗೀಡಾದ ಚರ್ಮದ ಅಂಗಾಂಶಗಳನ್ನು ಇದು ಸರಿಪಡಿಸುತ್ತದೆ. ತೆಂಗಿನೆಣ್ಣೆ ಜತೆಗೆ ಲಿಂಬೆರಸ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಸ್ನಾನ ಮಾಡಿ.
ಅಡುಗೆ ಸೋಡಾ ಚರ್ಮದ ಮೇಲ್ಪದರವನ್ನು ಕಿತ್ತು ಹಾಕುತ್ತದೆ. ಇದಕ್ಕೆ ತುಸು ನೀರು ಬೆರೆಸಿ ಕಂಕುಳಿಗೆ ಅಥವಾ ಕಪ್ಪಾದ ಭಾಗಗಳಿಗೆ ಹಚ್ಚಿ 15 ನಿಮಿಷ ಬಳಿಕ ತೊಳೆಯಬೇಕು.
ಅಲೋವೇರಾ, ಆಲೂಗಡ್ಡೆ, ಜೇನು ಕೂಡಾ ಉತ್ತಮ ಪರಿಣಾಮವನ್ನು ಬೀರುತ್ತದೆ. ಆಲೂಗಡ್ಡೆ ಸಿಪ್ಪೆ ತೆಗೆದು ಚರ್ಮದ ಮೇಲ್ಭಾಗಕ್ಕೆ ಸತತ 10 ನಿಮಿಷ ಕಾಲ ಉದ್ದಬೇಕು. ಜೇನಿಗೆ ಸಕ್ಕರೆ ಬೆರೆಸಿ ಸ್ಕ್ರಬ್ ರೂಪದಲ್ಲಿಯೂ ಬಳಸಬಹುದು.