ದೇಹದಲ್ಲಿರುವ ಮಚ್ಚೆಗೂ, ವ್ಯಕ್ತಿತ್ವಕ್ಕೂ ಮಹತ್ವದ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಚ್ಚೆ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಶುಭ ಹಾಗೂ ಯಾವ ಯಾವ ಲಾಭವಿದೆ ಎಂಬುದನ್ನು ವಿವರಿಸಲಾಗಿದೆ.
ಸಮುದ್ರಶಾಸ್ತ್ರದ ಪ್ರಕಾರ, ಬಲ ಹುಬ್ಬಿನ ಮೇಲೆ ಮಚ್ಚೆಯಿದ್ರೆ ಜೀವನದಲ್ಲಿ ಸಂತೋಷ ಹೆಚ್ಚಿರುತ್ತದೆ ಎಂದು ನಂಬಲಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ-ಸಾಮರಸ್ಯ ಚೆನ್ನಾಗಿರುತ್ತದೆಯಂತೆ. ಎಡ ಹುಬ್ಬಿನ ಮೇಲೆ ಮಚ್ಚೆಯಿದ್ರೆ ಅಶುಭವಂತೆ. ಸುಖ ಹಾಗೂ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಡಿಮೆಯಿರುತ್ತದೆ.
ಸಮುದ್ರಶಾಸ್ತ್ರದ ಪ್ರಕಾರ ಕುತ್ತಿಗೆ ಹಾಗೂ ಭುಜದ ಮಧ್ಯೆ ಮಚ್ಚೆಯಿದ್ರೆ ಅದು ಶುಭವಂತೆ. ಕುತ್ತಿಗೆ ಹಿಂಭಾಗದಲ್ಲಿ ಮಚ್ಚೆಯಿದ್ರೆ ಅಂಥ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಕುತ್ತಿಗೆ ಮೇಲೆ ಮಚ್ಚೆಯಿದ್ರೆ ಆತ ಉತ್ತಮ ಧ್ವನಿ ಹೊಂದಿರುತ್ತಾನಂತೆ.
ಪುರುಷ ಇರಲಿ ಮಹಿಳೆ ಕಂಕುಳಿನಲ್ಲಿ ಮಚ್ಚೆಯಿದ್ರೆ ಅದು ಅಶುಭ. ಕಂಕುಳಿನಲ್ಲಿ ಮಚ್ಚೆ ಹೊಂದಿರುವವರು ಆರ್ಥಿಕ ಸಮಸ್ಯೆ ಎದುರಿಸುತ್ತಿರುತ್ತಾರೆ.
ಮೂಗಿನ ತುದಿಯಲ್ಲಿ ಮಚ್ಚೆಯಿದ್ರೆ ಆ ವ್ಯಕ್ತಿ ಸಂತೋಷ ಹಾಗೂ ಐಷಾರಾಮಿ ಜೀವನ ನಡೆಸುತ್ತಾನಂತೆ. ಮೂಗಿನ ಬಲ ಭಾಗದಲ್ಲಿ ಮಚ್ಚೆಯಿದ್ರೆ ಅಧಿಕ ಲಾಭ ಪ್ರಾಪ್ತಿಯಾಗುತ್ತದೆ. ಮೂಗಿನ ಎಡ ಭಾಗದಲ್ಲಿ ಮಚ್ಚೆಯಿದ್ರೆ ಯಾವುದೇ ಕೆಲಸ, ಲಾಭಕ್ಕಾಗಿ ಹೆಚ್ಚು ಕಷ್ಟಪಡಬೇಕಾಗುತ್ತದೆ.