alex Certify ದೇಹದ ಆಮ್ಲಜನಕ ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಈ ಪದಾರ್ಥ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದ ಆಮ್ಲಜನಕ ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಈ ಪದಾರ್ಥ ಸೇವಿಸಿ

ಸದ್ಯದ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನ ಎಷ್ಟೊಂದು ಕಾಳಜಿಯಿಂದ ನೋಡಿಕೊಂಡರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯೂ ನಮ್ಮ ಜೀವವನ್ನೇ ಕಿತ್ತುಕೊಂಡುಬಿಡಬಹುದು. ಹೀಗಾಗಿ ಕಾಯಿಲೆ ಬಂದ ಮೇಲೆ ಪರಿತಪಿಸೋದಕ್ಕಿಂತ ಮುಂಜಾಗ್ರತಾ ಕ್ರಮ ಹೆಚ್ಚು ಸೂಕ್ತ.

ಪ್ರಸ್ತುತ ದೇಹದಲ್ಲಿ ಆಮ್ಲಜನಕ ಮಟ್ಟ ಸರಿಯಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ನೀವು ಈ ಕೆಳಗಿನ ಆಹಾರ ಪದಾರ್ಥಗಳನ್ನ ಹೆಚ್ಚಾಗಿ ಸೇವಿಸಿ.

ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಅಂಶಗಳು ಅಡಗಿವೆ. ಇದನ್ನ ಅಡುಗೆಯಲ್ಲಿ ಬಳಕೆ ಮಾಡೋದ್ರಿಂದ ಅಡುಗೆ ರುಚಿ ಹೆಚ್ಚೋದ್ರ ಜೊತೆಗೆ ನಿಮ್ಮ ದೇಹದ ಆಮ್ಲಜನಕ ಮಟ್ಟವೂ ಸುಧಾರಿಸಲಿದೆ. ಬೆಳ್ಳುಳ್ಳಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತೆ.

ನಿಂಬೆ ಹಣ್ಣು : ನಿಂಬೆ ಹಣ್ಣಿನ ವಿಶೇಷತೆ ಅಂದರೆ ಅದರಲ್ಲಿ ಅಡಗಿರುವ ಅಪಾರ ಪ್ರಮಾಣದ ವಿಟಮಿನ್​ ಸಿ ಅಂಶ. ವಿಟಮಿನ್ ಸಿ ಅಂಶ ಹೇರಳವಿರುವ ಯಾವುದೇ ಹಣ್ಣು / ತರಕಾರಿ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸುವ ಕೆಲಸ ಮಾಡುತ್ತೆ.

ಕಿವಿ ಹಣ್ಣು : ಕಿವಿ ಕೂಡ ಇದೇ ವಿಟಮಿನ್​ ಸಿ ಕಾರಣದಿಂದಲೇ ಹೆಚ್ಚು ಉಪಯೋಗಕಾರಿ ಎನಿಸಿದೆ. ಹೀಗಾಗಿ ಈ ಹಣ್ಣಿನ ಸೇವನೆ ಈ ಪರಿಸ್ಥಿತಿಯಲ್ಲಿ ತುಂಬಾನೇ ಮುಖ್ಯವಾಗಿದೆ.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಅಲ್ಕಲಿನ್ ಅಂಶ ಅತಿಯಾಗಿ ಇರೋದ್ರಿಂದ ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಲಿದೆ.

ಮೊಸರು : ಮೊಸರಿನಲ್ಲಿ ವಿಟಾಮಿನ್​, ಪ್ರೋಟಿನ್​ ಹಾಗೂ ಕ್ಯಾಲ್ಶಿಯಂ ಅಗಾಧ ಪ್ರಮಾಣದಲ್ಲಿದೆ. ಈ ಮೊಸರಿನ ಸೇವನೆ ಕೂಡ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...