ಕೊರೊನಾದಂತಹ ಮಾರಕ ಕಾಯಿಲೆಗಳು ನಮ್ಮ ಸುತ್ತ ಮುತ್ತಲೇ ಇರೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳೋದು ಬಹಳ ಮುಖ್ಯ. ಬದಲಾದ ಜೀವನ ಶೈಲಿ, ಸತ್ವವೇ ಇಲ್ಲದ ಆಹಾರ, ಚಟುವಟಿಕೆಯಿಲ್ಲದ ಜೀವನ ಇವೆಲ್ಲವುಗಳಿಂದ ನಮ್ಮ ದೇಹ ಸತುವನ್ನೇ ಕಳೆದುಕೊಂಡಿರುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಇದು ಕಾಯಿಲೆಗಳ ವಿರುದ್ಧ ಹೋರಾಡಲು ನಮ್ಮ ದೇಹವನ್ನು ಬಲಪಡಿಸುತ್ತದೆ. ಇದರ ಜೊತೆ ಜೊತೆಗೆ ನಿಮ್ಮ ದೇಹದ ಆಮ್ಲಜನಕದ ಮಟ್ಟದ ಬಗ್ಗೆಯೂ ನೀವು ಗಮನ ಕೊಡಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ. ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸರಳ ಉಪಾಯವಿದೆ. ಇದಕ್ಕಾಗಿ ನೀವು ಕೆಲವು ನಿರ್ದಿಷ್ಟ ಹಣ್ಣುಗಳನ್ನು ತಿನ್ನಬೇಕು.
ಪೇರ್ಸ್: ಸೇಬು ಹಣ್ಣಿನಂತೆಯೇ ಇರುವ ಈ ಪೇರ್ಸ್ ನಿಮ್ಮ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಪ್ರೋಟೀನ್, ಫೈಬರ್ ಮತ್ತು ತಾಮ್ರದಂತಹ ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಪಪ್ಪಾಯ: ಪಪ್ಪಾಯ ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಹಣ್ಣು. ಹೊಟ್ಟೆಯ ಸಮಸ್ಯೆಗೂ ಇದು ಪರಿಹಾರ ನೀಡಬಲ್ಲದು. ಇದನ್ನು ಬೆಳಗ್ಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಪಪ್ಪಾಯ ಹಣ್ಣಿನಲ್ಲಿ ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಮುಂತಾದ ಪೋಷಕಾಂಶಗಳಿವೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ನಿಮ್ಮ ದೇಹದಲ್ಲಿ ಆಮ್ಲಜನಕವು ಕಡಿಮೆಯಾಗುತ್ತಿದ್ದರೆ ಪಪ್ಪಾಯ ಹಣ್ಣನ್ನು ಸೇವನೆ ಮಾಡಿ.
ಕಿವಿ: ಹುಳಿ ಮತ್ತು ಸಿಹಿಯ ಮಿಶ್ರಣವಾಗಿರೋ ಕಿವಿ ಹಣ್ಣು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದರ ಸೇವನೆಯು ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳು ಕಿವಿ ಹಣ್ಣಿನಲ್ಲಿವೆ. ಕಿವಿ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದುರಿಂದ ನಿಮ್ಮ ಮುಖದಲ್ಲಿ ಹೊಳಪು ಕೂಡ ಬರುತ್ತದೆ.