ತೆಂಗಿನ ಕಾಯಿಯಲ್ಲಿ ಕೊಲೆಸ್ಟ್ರಾಲ್ ಇದೆ, ದೈನಂದಿನ ಆಹಾರದಲ್ಲಿ ಅದನ್ನು ಬಳಸಲೇ ಬಾರದು. ಹೃದಯಾಘಾತಕ್ಕೆ ಇದೇ ಮುಖ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಮತ್ತೆ ತೆಂಗಿನೆಣ್ಣೆ ಬಳಕೆಯ ಕೂಗು ಕೇಳಿ ಬರುತ್ತಿದೆ. ಇದರಲ್ಲಿರುವ ಗುಡ್ ಕೊಲೆಸ್ಟ್ರಾಲ್ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶವೆಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ.
ಆದರೆ ಪ್ರಸ್ತುತ ಮಳಿಗೆಗಳಲ್ಲಿ ಸಿಗುವ ಪ್ಯಾಕ್ಡ್ ತೆಂಗಿನೆಣ್ಣೆಗಳು ಸಂಸ್ಕರಣೆಗೊಂಡವೇ. ಆದರೆ ಅದರ ಗುಣಮಟ್ಟ ಹಾಳಾಗಿರುತ್ತದೆ.
ಹೈಡ್ರೋಜನೆಟ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಎಣ್ಣೆ ಮಾತ್ರ ತನ್ನ ಮೂಲ ಗುಣವನ್ನು ಉಳಿಸಿಕೊಂಡಿರುತ್ತದೆ. ಕೊಳ್ಳುವ ಮುನ್ನ ಇದನ್ನು ಗಮನಿಸುವುದು ಬಹಳ ಮುಖ್ಯ.
ಇತಿ ಮಿತಿಯಲ್ಲಿ ತೆಂಗಿನೆಣ್ಣೆ ಬಳಕೆ ಮಾಡುವುದು ಬಹಳ ಮುಖ್ಯ. ಅತಿಯಾದರೆ ಅಮೃತವೂ ವಿಷ ಎಂಬುದನ್ನು ನೆನಪಿಟ್ಟುಕೊಂಡು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಕಡಿಮೆ ಸೇವನೆ ಮಾಡುವುದೇ ಇದಕ್ಕೆ ಪರಿಹಾರ.