ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು ಸವಿಯಿರಿ. ಇದು ದೇಹಕ್ಕೂ ತಂಪು, ಆರೋಗ್ಯಕ್ಕೂ ಒಳ್ಳೆಯದು.
1 ಗ್ಲಾಸ್ ರಾಗಿಹಿಟ್ಟಿಗೆ 5 ಲೋಟ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ತಿರುಗಿಸಿ. ನಂತರ ಅದಕ್ಕೆ ½ ಟೀ ಸ್ಪೂನ್ ಉಪ್ಪು, ½ ಟೀ ಸ್ಪೂನ್ ಜೀರಿಗೆ, 2 ಚಮಚದಷ್ಟು ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ರಾಗಿ ಮಿಶ್ರಣವನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ತಿರುಗಿಸಿ. 3 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಅದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
ಈ ಅಂಬಲಿ ತಣ್ಣಗಾಗುವುದಕ್ಕೆ ಬಿಟ್ಟುಬಿಡಿ. ನಂತರ ಒಂದು ಗ್ಲಾಸ್ ಗೆ 2 ಟೇಬಲ್ ಸ್ಪೂನ್ ನಷ್ಟು ಈ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಹಸಿ ನೀರುಳ್ಳಿ, ಬೇಕಿದ್ದರೆ ಹಸಿಮೆಣಸು, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ 2 ದೊಡ್ಡ ಚಮಚದಷ್ಟು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಿರಿ ಜೀವಕ್ಕೆ ತಂಪಾಗುತ್ತದೆ.