ಬಾರ್ಲಿ ಪುರಾತನ ಕಾಲದ ಒಂದು ಧಾನ್ಯ. ಬಾರ್ಲಿಯಲ್ಲಿ ಹೇರಳವಾದ ಖನಿಜಾಂಶಗಳಿವೆ ಜೊತೆಗೆ ನಾರಿನಂಶವೂ ಇದೆ. ಬಾರ್ಲಿ ನೀರನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು.
ಬಾರ್ಲಿಯನ್ನು ತರಿತರಿಯಾಗಿ ಪುಡಿ ಮಾಡಿ ಗಂಜಿ ಮಾಡಬಹುದು.
ಹಿಂದಿನ ರಾತ್ರಿ ಅರ್ಧ ಕಪ್ ಬಾರ್ಲಿಯನ್ನು ನೆನೆಸಿ, ಮಾರನೇ ದಿನ 3 ದೊಡ್ಡ ಲೋಟದಲ್ಲಿ ನೀರು ಹಾಕಿ 5-6 ಬಾರಿ ಕುಕ್ಕರಿನಲ್ಲಿ ಕೂಗಿಸಿ ನಂತರ ಈ ಬಾರ್ಲಿ ನೀರಿಗೆ ಚಿಟಿಕೆ ಉಪ್ಪು, ಬೆಲ್ಲ, ಹಾಲು ಮಿಶ್ರಣ ಮಾಡಿ ಸೇವನೆ ಮಾಡಿದರೆ ದೇಹಕ್ಕೆ ತಂಪಿನ ಅನುಭವ ಆಗುತ್ತದೆ. ಪಾದ, ಹೊಟ್ಟೆ ಉರಿ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ ಬಾರ್ಲಿ ಪೇಯ.