ಬಸಳೆ ಸೊಪ್ಪು- 1 ಬಟ್ಟಲು
ಹಸಿ ಮೆಣಸಿನಕಾಯಿ – 10
ಈರುಳ್ಳಿ – 5
ಬೆಳ್ಳುಳ್ಳಿ – 25 ಎಸಳು
ಅರಿಶಿಣ ಪುಡಿ – 1 ಚಮಚ
ಒಣ ಮೆಣಸಿನ ಪುಡಿ – 2 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅಕ್ಕಿ – 1 ಕೆ.ಜಿ
ಬೆಣ್ಣೆ – 1/2 ಕೆ.ಜಿ
ಉಪ್ಪು ರುಚಿಗೆ ತಕ್ಕಷ್ಟು.
ʼನುಗ್ಗೆಸೊಪ್ಪುʼ ಸೇವನೆಯಿಂದ ಸಿಗುವ ಆರೋಗ್ಯ ಲಾಭ ಕೇಳಿದ್ರೆ ಬೆರಗಾಗ್ತೀರಾ…!
ಮಾಡುವ ವಿಧಾನ
ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಬಸಳೆ ಸೊಪ್ಪು ಹಾಕಿ ಬಾಡಿಸಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಒಣ ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಹುರಿಯಿರಿ. ಬಳಿಕ ಇದಕ್ಕೆ ತೊಳೆದ ಅಕ್ಕಿ ಹಾಕಿ ಅಗತ್ಯವಿರುವಷ್ಟು ನೀರು ಹಾಕಿ ಬೇಯಿಸಿ. ಬಿಸಿ ಬಿಸಿಯಾದ ಬಸಳೆ ಸೊಪ್ಪಿನ ರೈಸ್ ರೆಡಿ ಟು ಈಟ್.