ಸತಾರಾ: ದೇಶದ ವಿವಿಧ ಭಾಗಗಳಲ್ಲಿ ಗಣೇಶ ಹಬ್ಬದ ಸಡಗರ ಮುಂದುವರೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಲಾವಿದರೊಬ್ಬರು ವಿಶೇಷ ಗಣಪತಿ ವಿಗ್ರಹವನ್ನು ತಯಾರಿಸಿದ್ದು ದೇಶದ ಗಮನ ಸೆಳೆಯುತ್ತಿದೆ.
ಗಣಪತಿ ಮೂರ್ತಿಯ ಪಾದವನ್ನು ಮುಟ್ಟಿದರೆ ಪ್ರಥಮವಂದ್ಯ, ವಿಘ್ನನಿವಾರಕ ಗಣಪತಿ ಎದ್ದು ನಿಂತು ಆಶೀರ್ವಾದ ಮಾಡುತ್ತಾನೆ.
ವಿಶಿಷ್ಠವಾಗಿ ನಿರ್ಮಿಸಿರುವ ಈ ವಿನಾಯಕನ ಮೂರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.