alex Certify ದೇಶವನ್ನು ಉಳಿಸಲು ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್​ ಧೀರ ಯೋಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶವನ್ನು ಉಳಿಸಲು ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್​ ಧೀರ ಯೋಧ..!

ರಷ್ಯಾದ ಪಡೆಗಳು ಕ್ರೈಮಿಯಾಗೆ ನುಗ್ಗುವುದನ್ನು ತಡೆಯುವ ಸಲುವಾಗಿ ಸೇತುವೆಯನ್ನು ಧ್ವಂಸಗೊಳಿಸಲು ಉಕ್ರೇನಿಯನ್​ ಸೈನಿಕನು ತನ್ನನ್ನು ತಾನೇ ಧ್ವಂಸಗೊಳಿಸಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆರ್ಸನ್​ ಪ್ರದೇಶದ ಹೆನಿಚೆಸ್ಕ್​ ಸೇತುವೆಯಲ್ಲಿ ರಷ್ಯಾದ ಟ್ಯಾಂಕರ್​ಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಧೈರ್ಯಶಾಲಿ ಯೋಧ ವಿಟಾಲಿ ಸ್ಕಕುನ್​​ ವೊಮೊಡಿಮಿರೊವಿಚ್​ ಹುತಾತ್ಮರಾದರು.

ರಷ್ಯಾದ ಸೇನೆಯು ಕ್ರೈಮಿಯಾವನ್ನು ನಾಶಪಡಿಸಲು ಇದ್ದು ಏಕಮಾತ್ರ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಉಕ್ರೇನ್​ ಸೇನೆ ನಿರ್ಧರಿಸಿತ್ತು. ಸ್ಕಕುನ್​ಗೆ ಈ ಸ್ಪೋಟದಿಂದ ತಪ್ಪಿಸಿಕೊಳ್ಳಲು ಸಮಾಯವಕಾಶ ಸಿಗುವ ಮಾತೇ ಇರಲಿಲ್ಲ. ಆದರೂ ಅಂಜದ ಯೋಧ ಸ್ಕಕುನ್​​ ತನ್ನ ಸಹೋದ್ಯೋಗಿಗಳ ಬಳಿ ಈ ಸೇತುವೆಯನ್ನು ಸ್ಫೋಟಗೊಳಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಬಳಿಕ ಅವರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ ಸೇನೆಯು ಅಧಿಕೃತ ಮಾಹಿತಿಯನ್ನು ನೀಡಿದೆ.

ಸ್ಕಕುನ್​​ ಸೇತುವೆಯ ಮೇಲೆ ಸ್ಫೋಟಕಗಳನ್ನು ಇರಿಸಿದರು. ಸ್ಕಕುನ್​ ಸ್ವಯಂಪ್ರೇರಿತರಾಗಿ ಈ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೇತುವೆಯನ್ನು ನಾಶಪಡಿಸಲಾಯ್ತು. ಆದರೆ ಸ್ಕಕುನ್​ಗೆ ಈ ಸ್ಫೋಟದಿಂದ ಬಚಾವಾಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...