ಭಾರತೀಯ ರೈಲ್ವೇ ಇತ್ತೀಚೆಗೆ ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗ್ಪುರದ ರಾಜನಂದಗಾವ್ ನಡುವೆ 27,000 ಟನ್ ಕಲ್ಲಿದ್ದಲನ್ನು ಸಾಗಿಸುವ 295 ಲೋಡ್ ಮಾಡಲಾದ ವ್ಯಾಗನ್‌ಗಳೊಂದಿಗೆ 3.5 ಕಿ.ಮೀ ಉದ್ದದ ಸರಕು ರೈಲು ʼಸೂಪರ್ ವಾಸುಕಿʼಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿತು. ಇದು ಭಾರತದ ಅತಿ ಉದ್ದದ ಮತ್ತು ಭಾರವಾದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊಠಾರಿ ರಸ್ತೆ ನಿಲ್ದಾಣದ ಮೂಲಕ ರೈಲು ಹಾದು ಹೋಗುವ ವಿಡಿಯೋವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಆಸ್ಟ್ರೇಲಿಯಾದ ಬಿ ಎಚ್ ಪಿ ಕಬ್ಬಿಣದ ಅದಿರು ರೈಲು 7.352 ಕಿ.ಮೀ. ಉದ್ದವನ್ನು ಹೊಂದಿದೆ. ಇದು ವಿಶ್ವದ ಅತಿ ಉದ್ದದ ಸರಕು ರೈಲು (ಒಟ್ಟಾರೆ ಉದ್ದದ ರೈಲು ಕೂಡ) ಆಗಿದೆ.
ಆಗಸ್ಟ್ 15ರ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರೈಲನ್ನು ಚಲಾಯಿಸಲಾಯಿತು. ಆಗ್ನೇಯ ಮಧ್ಯ ರೈಲ್ವೆಯಿಂದ ಆಗಸ್ಟ್ 15 ರಂದು 1:50 ಕ್ಕೆ ಕೊರ್ಬಾದಿಂದ ಹೊರಟ ರೈಲು, 267 ಕಿ.ಮೀ ದೂರವನ್ನು ಕ್ರಮಿಸಲು 11.20 ಗಂಟೆಗಳನ್ನು ತೆಗೆದುಕೊಂಡಿತು. ಇದು ರೈಲ್ವೇಯಿಂದ ಇದುವರೆಗೆ ನಡೆಸಲ್ಪಡುವ ಅತಿ ಉದ್ದದ ಮತ್ತು ಭಾರವಾದ ಸರಕು ಸಾಗಣೆ ರೈಲು ಇದಾಗಿದೆ. ರೈಲು ನಿಲ್ದಾಣವನ್ನು ದಾಟಲು ಸುಮಾರು ನಾಲ್ಕು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಹಿಂದೂಗಳ ನಂಬಿಕೆಯ ಪ್ರಕಾರ ಸರ್ಪಗಳ ದೇವರಾದ ವಾಸುಕಿಯಿಂದ ಸರಕು ರೈಲು ತನ್ನ ಹೆಸರನ್ನು ಪಡೆದುಕೊಂಡಿದೆ. ಶಿವನ ಹಾವು, ವಾಸುಕಿ, ಅವನ ಕೊರಳಿನಲ್ಲಿರುವಂತೆ ಚಿತ್ರಿಸಲಾಗಿದೆ. ಹಾವಿನ ತಲೆಯ ಮೇಲೆ ನಾಗಮಣಿ ಎಂಬ ರತ್ನವಿದೆ ಎಂದು ನಂಬಲಾಗುತ್ತದೆ.
ಅಧಿಕಾರಿಗಳ ಪ್ರಕಾರ, ಸೂಪರ್ ವಾಸುಕಿ ಇಡೀ ದಿನಕ್ಕೆ 3000 ಎಂಡಬ್ಲ್ಯೂ ವಿದ್ಯುತ್ ಸ್ಥಾವರವನ್ನು ನಿರ್ವಹಿಸಲು ಸಾಕಷ್ಟು ಕಲ್ಲಿದ್ದಲನ್ನು ಒಯ್ಯುತ್ತದೆ. ಇದು ಈಗ ಬಳಕೆಯಲ್ಲಿರುವ 90 ಕಾರ್, 100 ಟನ್ ರೈಲು ರೇಕ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಕಲ್ಲಿದ್ದಲನ್ನು ಒಂದೇ ಟ್ರಿಪ್‌ನಲ್ಲಿ ಸಾಗಿಸಬಹುದು.
ವಿದ್ಯುತ್ ಸ್ಥಾವರಗಳಿಗೆ ಇಂಧನ ಕೊರತೆಯನ್ನು ತಪ್ಪಿಸುವ ಸಲುವಾಗಿ, ರೈಲ್ವೇಯು ಸರಕು ರೈಲುಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.
ವಿಶೇಷವಾಗಿ ವಿದ್ಯುತ್ ಕೇಂದ್ರಗಳ ಇಂಧನ ಕೊರತೆಯನ್ನು ತಡೆಗಟ್ಟಲು ಗರಿಷ್ಠ ಬೇಡಿಕೆಯ ಋತುವಿನಲ್ಲಿ ಕಲ್ಲಿದ್ದಲು ಸಾಗಿಸಲು ಯೋಜಿಸಲಾಗಿದೆ. ಐದು ರೇಕ್‌ಗಳ ಗೂಡ್ಸ್ ರೈಲುಗಳನ್ನು ಒಂದು ಘಟಕವಾಗಿ ಸಂಯೋಜಿಸುವ ಮೂಲಕ ರೈಲನ್ನು ರಚಿಸಲಾಗಿದೆ. ರೈಲ್ವೇ ಈ ವ್ಯವಸ್ಥೆಯನ್ನು (ಉದ್ದದ ಸರಕು ರೈಲುಗಳು) ಹೆಚ್ಚಾಗಿ ಬಳಸಲು ಯೋಜಿಸಿದೆ.