ಸಾಫ್ಟ್ ಬ್ಯಾಂಕ್ ಗ್ರೂಪ್ ಬೆಂಬಲಿತ ಓಲಾ ಎಲೆಕ್ಟ್ರಿಕ್ ದೇಶದಲ್ಲಿ 50 GWH ಸಾಮರ್ಥ್ಯದ ಬ್ಯಾಟರಿ ಸೆಲ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಲು ಹೊರಟಿದೆ. 10 ಮಿಲಿಯನ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಉತ್ಪಾದಿಸುವ ವಾರ್ಷಿಕ ಗುರಿಯನ್ನು ಪೂರೈಸಲು 40Gwh ಬ್ಯಾಟರಿ ಸಾಮರ್ಥ್ಯದ ಅಗತ್ಯವಿದೆ ಎನ್ನಲಾಗಿದೆ. 2023ರ ವೇಳೆಗೆ 1 ಜಿಡಬ್ಲುಹೆಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 20 ಜಿಡಬ್ಲುಹೆಚ್ಗೆ ವಿಸ್ತರಿಸುವುದು ಆರಂಭಿಕ ಯೋಜನೆಯಾಗಿದೆ.
ಓಲಾ ಕಂಪನಿಯು ಪ್ರಸ್ತುತ ದಕ್ಷಿಣ ಕೊರಿಯಾದಿಂದ ಬ್ಯಾಟರಿ ಸೆಲ್ಗಳನ್ನು ಆಮದು ಮಾಡಿಕೊಳ್ತಿದೆ. ಸುಧಾರಿತ ಸೆಲ್ ಹಾಗೂ ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದೆ. ದೇಶದಲ್ಲಿ ಬ್ಯಾಟರಿ ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯವನ್ನು ಸ್ಥಾಪಿಸಿದೆ ಎಂದು ಮೂಲಗಳು ತಿಳಿಸಿವೆ.
ಟೆಸ್ಲಾ ಇಂಕ್ ಮತ್ತು ವೋಕ್ಸ್‌ವ್ಯಾಗನ್‌ನಂತಹ ಪ್ರಮುಖ ಜಾಗತಿಕ ವಾಹನ ತಯಾರಕರಿಗೆ ಸರಬರಾಜು ಮಾಡುವ CATL, LG ಎನರ್ಜಿ ಸೊಲ್ಯೂಷನ್ಸ್ ಮತ್ತು Panasonic ಸೇರಿದಂತೆ ಕೆಲವು ಏಷ್ಯಾದ ಕಂಪನಿಗಳು ಬ್ಯಾಟರಿ ಸೆಲ್ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿವೆ.
ಬ್ಯಾಟರಿ ಮತ್ತು ಸೆಲ್ ಸಂಶೋಧನೆ ಮತ್ತು ಉತ್ಪಾದನೆಯು ನಾವು ಕೇಂದ್ರೀಕರಿಸಬೇಕಾದ ಪ್ರಮುಖ ಕ್ಷೇತ್ರವಾಗಿದೆ ಮತ್ತು ನಮ್ಮ ಯೋಜನೆಗಳು ಮುಂದುವರಿದ ಹಂತಗಳಲ್ಲಿವೆ. ಎಂದು ಓಲಾ ಎಲೆಕ್ಟ್ರಿಕ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ವರುಣ್ ದುಬೆ ಹೇಳಿದರು.