ಬೆಂಗಳೂರು: ಈಸಿ ಆಫ್ ಲಿವಿಂಗ್ ಇಂಡೆಕ್ಸ್-2020ರ ಪಟ್ಟಿಯಲ್ಲಿ ದೇಶದಲ್ಲಿ ವಾಸಿಸಲು ಯೋಗ್ಯವಾದ ಮಹಾನಗರಗಳ ಪೈಕಿ ಬೆಂಗಳೂರಿಗೆ ಪ್ರಥಮ ಸ್ಥಾನ ದೊರೆತಿದೆ.
ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ನೀಡಲಾಗುವ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದ್ದು, ರಾಷ್ಟ್ರ ರಾಜಧಾನಿ ದೆಹಲಿ 13ನೇ ಸ್ಥಾನದಲ್ಲಿದೆ. ಪುಣೆ 2ನೇ ಸ್ಥಾನ, ಅಹಮದಾಬಾದ್ 3, ಚೆನ್ನೈ 4ನೇ ಸ್ಥಾನ, ದಾವಣಗೆರೆ 9ನೇ ಸ್ಥಾನ, ಮಂಗಳೂರು 20, ಶಿವಮೊಗ್ಗ 26 ಹಾಗೂ ಸಾಗರ 25, ಹಾಗೂ ಹುಬ್ಬಳ್ಳಿ-ಧಾರವಾಡ 37ನೇ ಸ್ಥಾನ ನೀಡಲಾಗಿದೆ.
ಜೀವನದ ಗುಣಮಟ್ಟ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ ಸೇರಿದಂತೆ 49 ಮಾನದಂಡ ಅನುಸರಿಸಿ ದೇಶದ 49 ನಗರಗಳ ಮೌಲ್ಯ ಮಾಪನ ಮಾಡಲಾಗಿದ್ದು ಈ ನಗರಗಳ ಪೈಕಿ ವಾಸಿಸಲು ಬೆಂಗಳೂರೇ ಬೆಸ್ಟ್ ಎಂದು ಪರಿಗಣಿಸಲಾಗಿದೆ.