ನವದೆಹಲಿ: ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ದೇಶದಲ್ಲಿ ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 156 ಜನರಲ್ಲಿ ರೂಪಾಂತರಿ ವೈರಸ್ ಓಮಿಕ್ರಾನ್ ಕಾಣಿಸಿಕೊಂಡಿದೆ.
ಈ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 578ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಓಮಿಕ್ರಾನ್ ಸಂಖ್ಯೆಯೇ ಇದುವರೆಗೂ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಡಿ. 24ರಂದು ದೇಶದಲ್ಲಿ 122 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು. ಇದೇ ದೊಡ್ಡ ಸಂಖ್ಯೆಯಾಗಿತ್ತು.
BIG BREAKIG: 24 ಗಂಟೆಯಲ್ಲಿ ಮತ್ತೆ 6,358 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 6,450 ಜನರು ಡಿಸ್ಚಾರ್ಜ್
ಈಗಾಗಲೇ ದೇಶದ 19 ರಾಜ್ಯಗಳಿಗೆ ಓಮಿಕ್ರಾನ್ ಎಂಟ್ರಿ ಕೊಟ್ಟಿದೆ. ಹೀಗಾಗಿ ಆತಂಕ ಮನೆ ಮಾಡುತ್ತಿದೆ. ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ರೂಪಾಂತರಿಯ ಭಯ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ 142 ಹಾಗೂ ಮಹಾರಾಷ್ಟ್ರದಲ್ಲಿ 141 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 38 ಪ್ರಕರಣಗಳು ಪತ್ತೆಯಾಗಿವೆ.