ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ.
ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ ಪದ್ಧತಿಗಳು ನಡೆದುಕೊಂಡು ಬಂದಿವೆ.
ಭೋಜನ ಮಾಡುವಾಗ ವ್ಯಕ್ತಿಯ ಮುಖ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಇದು ಶರೀರದಲ್ಲಿ ಹೆಚ್ಚು ಶಕ್ತಿ ಉತ್ಪತ್ತಿಗೆ ನೆರವಾಗುತ್ತದೆ.
ಧರ್ಮ ಗ್ರಂಥಗಳ ಪ್ರಕಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವನೆ ಮಾಡುವುದು ಅಶುಭ. ಈ ದಿಕ್ಕಿನಲ್ಲಿ ಆಹಾರ ತಿನ್ನುವುದ್ರಿಂದ ರೋಗ ಹೆಚ್ಚಾಗುತ್ತದೆ.
ಆಹಾರವನ್ನು ಬಿದಿರಿನ ಅಥವಾ ಮರದ ಹಲಗೆ ಮೇಲಿಟ್ಟು ತಿನ್ನಬೇಕು.
ವ್ಯಕ್ತಿ ಸ್ನಾನ ಮಾಡಿ, ಪವಿತ್ರವಾಗಿ ಆಹಾರ ತಯಾರಿಸಬೇಕು.
ಕೈನಲ್ಲಿ ಭೋಜನದ ಬಟ್ಟಲು ಹಿಡಿದುಕೊಂಡು ಅಥವಾ ನಿಂತು ಎಂದೂ ಆಹಾರ ಸೇವನೆ ಮಾಡಬಾರದು. ಸದಾ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಬೇಕು.
ಅಡುಗೆ ಮಾಡುವಾಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಯಾವುದಾದ್ರೂ ದೇವರ ಧ್ಯಾನ ಮಾಡ್ತಾ ಆಹಾರ ತಯಾರಿಸಬಹುದು.
ಭೋಜನ ಮಾಡುವ ಮೊದಲು ಅನ್ನ ದೇವತೆ ಅನ್ನಪೂರ್ಣೆಯನ್ನು ಸ್ಮರಿಸಿ.