ದೇವಸ್ಥಾನದ ಹುಂಡಿಯನ್ನು ಕದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಪೆರರ್ಕಡ ಪೊಲೀಸರು ಬಂಧಿಸಿದ್ದಾರೆ. ಅಂಬ್ಲಮುಕ್ಕು ಬಳಿಯ ದೇವಸ್ಥಾನದ ಹುಂಡಿಯಲ್ಲಿ ಇವರು ಹಣವನ್ನು ಕದಿಯಲೆತ್ನಿಸಿದ್ದರು ಎನ್ನಲಾಗಿದೆ.
ಫೆಬ್ರವರಿ 24 ರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳು ಪೇರೂರು ಶ್ರೀಕೃಷ್ಣ ಸ್ವಾಮಿ ದೇವಸ್ಥಾನದ ಹೊರಗೆ ಇರಿಸಲಾಗಿದ್ದ ಹುಂಡಿಯನ್ನು ಒಡೆದು ಅದರೊಳಗಿದ್ದ ಹಣವನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹುಂಡಿ ಕಳ್ಳತನದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಲರ್ಟ್ ಆದ ಪೆರರ್ಕಡ ಠಾಣಾ ಪೊಲೀಸರು ಆರೋಪಿಗಳನ್ನು ಪತ್ತಿ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಿರಣ್(24) ಹಾಗೂ ಜಿಶ್ನು(20) ಎಂದು ಗುರುತಿಸಲಾಗಿದೆ.