ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಹೂ, ಮಾಲೆಗಳು ಸಿಗೋದು ಸಾಮಾನ್ಯ. ಹೂಗಳನ್ನು ಆಶೀರ್ವಾದದ ರೂಪದಲ್ಲಿ ಪಡೆಯುವ ಭಕ್ತರು ಅದನ್ನು ಮನೆಗೆ ತರ್ತಾರೆ. ಮನೆಗೆ ತಂದ ಪ್ರಸಾದವನ್ನು ಎಲ್ಲಿಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಏನಾದ್ರೂ ಅಶುಭ ನಡೆದ್ರೆ ಎಂಬ ಭಯ ಕಾಡುತ್ತದೆ. ಜ್ಯೋತಿಷ್ಯದಲ್ಲಿ ಈ ಹೂವನ್ನು ಏನು ಮಾಡಬೇಕೆಂದು ಹೇಳಲಾಗಿದೆ.
ಪಂಡಿತರ ಪ್ರಕಾರ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಕ್ಕ ಹೂವನ್ನು ಮನೆಯಲ್ಲಿ ಕಪಾಟಿನಲ್ಲಿ ಭದ್ರವಾಗಿಡಬಹುದು. ಹಣ, ಆಭರಣವಿಡುವ ಜಾಗದಲ್ಲಿ ಹೂವನ್ನು ಇಡಬಹುದು. ಈ ಹೂವನ್ನು ಬಟ್ಟೆ ಅಥವಾ ಕಾಗದದಲ್ಲಿ ಕಟ್ಟಿಡಬೇಕು.
ಪ್ರಯಾಣದ ವೇಳೆ ಈ ಬಗ್ಗೆ ಹೆಚ್ಚು ಚಿಂತೆ ಕಾಡುತ್ತದೆ. ದೇವಸ್ಥಾನದಲ್ಲಿ ಸಿಕ್ಕ ಹೂ, ಮಾಲೆಯನ್ನು ಹೇಗೆ ಇಟ್ಟುಕೊಳ್ಳಬಹುದು ಎಂಬ ಸಮಸ್ಯೆ ಕಾಡುತ್ತದೆ.
ಸಾಮಾನ್ಯವಾಗಿ ಹೂ 2-3 ದಿನಕ್ಕೆ ಸಂಪೂರ್ಣ ಬಾಡಿ ಹೋಗುತ್ತದೆ. ಹೂ ಬಾಡಿದ ಮೇಲೆ ಯಾವುದೇ ಪ್ರಯೋಜನವಿಲ್ಲ. ಒಣಗುವ ಮೊದಲೇ ತನ್ನೆಲ್ಲ ಧನಾತ್ಮಕ ಶಕ್ತಿಯನ್ನು ಹರಡಿರುತ್ತದೆ. ಹಾಗಾಗಿ ಅದನ್ನು ಯಾವುದಾದ್ರೂ ಮರದ ಕೆಳಗೆ ಅಥವಾ ಸರೋವರ, ನದಿಯಲ್ಲಿ ಬಿಡಬಹುದು.