ಭಗವಂತನನ್ನು ನಾವು ಸರ್ವಶಕ್ತ, ಸರ್ವವ್ಯಾಪಿ ಹಾಗೂ ಕರುಣಾಮಯಿ ಎಂದು ನಂಬಿದ್ದೇವೆ. ಭಗವಂತ ನಮಗೆ ಎಲ್ಲಾ ಹಂತದಲ್ಲೂ ಕೈ ಹಿಡಿದು ಕಾಪಾಡುವ ರಕ್ಷಕ. ಇಂತಹ ಭಗವಂತನ ದರ್ಶನಕ್ಕೆ ನಾವು ಆಗಾಗ ದೇವಸ್ಥಾನಕ್ಕೆ ಹೋಗುತ್ತೇವೆ ಅಲ್ಲವೇ? ಹೀಗೆ ದೇವಸ್ಥಾನಕ್ಕೆ ತೆರಳುವಾಗ ಪೂಜಾ ಸಾಮಗ್ರಿಯ ಜೊತೆಗೆ ತಪ್ಪದೆ ತೆಂಗಿನ ಕಾಯಿಯನ್ನು ಅರ್ಪಿಸುತ್ತೇವೆ.
ದೇವರಿಗೆ ತೆಂಗಿನಕಾಯಿ ಅರ್ಪಿಸುವ ಹಿಂದಿನ ಉದ್ದೇಶ ಬಹಳ ಮಹತ್ವದ್ದು. ಈ ಪ್ರಪಂಚದ ಸಕಲ ಚರಾಚರ ವಸ್ತುಗಳು ದೇವರದ್ದೇ ಸೃಷ್ಟಿ ಅಂದ ಮೇಲೆ ದೇವರಿಗೆ ನಾವು ಕೊಡುವುದು ಏನು ? ನಮ್ಮ ನಿರ್ಮಲ ಭಕ್ತಿ ಹಾಗೂ ಪ್ರೀತಿ ಇಂದ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯ. ಭೂಮಿಯ ಮೇಲಿರುವ ನೀರಿನ ಆಕರಗಳಾದ ನದಿ, ಕೆರೆ, ಬಾವಿ, ಸಮುದ್ರ ಈ ಎಲ್ಲೆಡೆಯಲ್ಲೂ ಸಿಗುವ ನೀರು ಈಗಾಗಲೇ ಉಪಯೋಗವಾಗಿರುತ್ತದೆ.
ಕಲ್ಪವೃಕ್ಷ ಎಂದು ಕರೆಯುವ ತೆಂಗಿನ ಕಾಯಿಯ ಒಳಗೆ ಇರುವ ನೀರು ಮಾತ್ರ ಯಾರೂ ಬಳಸದ ಅತ್ಯಂತ ಪವಿತ್ರ ಜಲ. ಹಾಗಾಗಿ ದೇವರಿಗೆ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ವಸ್ತುಗಳನ್ನು ಅರ್ಪಿಸುವ ಉದ್ದೇಶದಿಂದ ತೆಂಗಿನ ಕಾಯಿಯನ್ನು ಭಗವಂತನಿಗೆ ಅರ್ಪಿಸುತ್ತಾರೆ.