ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದ ವಿಜಯಪುರ ಜಿಲ್ಲೆಯ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕೊರೊನಾ ಕಾರಣ ಒಡ್ಡಿ ರೈತರು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ತುಳಿಯುವ ಕಾರ್ಯ ಮಾಡುತ್ತಿದೆ. ಬನಶಂಕರಿ ದೇವಿ ಜಾತ್ರೆಗೂ ಸರ್ಕಾರ ವಿರೋಧ ಮಾಡಿತ್ತು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಧಾರ್ಮಿಕ ಆಚರಣೆ ಮಾಡಿ ದೇವಿಯ ಬಳಿ ಮನವಿ ಮಾಡಿದರೆ, ಕೊರೊನಾ ಸಂಪೂರ್ಣವಾಗಿ ತೊಲಗುತ್ತದೆ. ಅಂತಹ ಶಕ್ತಿ ದೇವಿಯಲ್ಲಿದೆ. ಆದರೆ, ದೇವರ ಮೊರೆ ಹೋಗದೆ, ಭಕ್ತರನ್ನು ಹಾಗೂ ಜನರನ್ನು ಶೋಷಿಸಿದರೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಜನರು ಬಿಜೆಪಿಯನ್ನು ನಂಬಿ ಮತ ಹಾಕಿದ್ದಾರೆ. ಆದರೆ, ಇವರು ಧರ್ಮ ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಹಿಂದೂಗಳ ದೇವಸ್ಥಾನಗಳನ್ನೇ ಇವರು ಕೆಡವಿದ್ದಾರೆ. ಹೀಗಾಗಿ ಬಿಜೆಪಿಗೆ ಹಿಂದುಗಳ ಶಾಪ ತಟ್ಟದೆ ಇರದು ಎಂದು ಗುಡುಗಿದ್ದಾರೆ.
ಬಿಜೆಪಿ ನಾಯಕರು ಬಂದರೆ, ಲಕ್ಷಾಂತರ ಜನರನ್ನು ಕೂಡಿಸುತ್ತಾರೆ. ಆ ಸಂದರ್ಭದಲ್ಲಿ ಇವರಿಗೆ ಕೊರೊನಾ ಹರಡುವುದಿಲ್ಲ. ಬದಲಾಗಿ ದೇವರ ಜಾತ್ರೆ ಮಾಡಿದರೆ ಸೋಂಕು ಹಬ್ಬುತ್ತದೆ. ಸಿಎಂ ಬೊಮ್ಮಾಯಿಗೆ ದೇವರ ಶಾಪ ತಟ್ಟದೇ ಇರುವುದಿಲ್ಲ ಎಂದು ಎಂದಿದ್ದಾರೆ.