ಹಿಂದು ಧರ್ಮದಲ್ಲಿ ವಿಭಿನ್ನ ಸಂಪ್ರದಾಯಗಳು ಆಚರಣೆಯಲ್ಲಿವೆ. ಹಿಂದೆ ನಡೆದುಕೊಂಡು ಬಂದ ಪದ್ಧತಿಯನ್ನು ಈಗಲೂ ಅನೇಕರು ಅನುಸರಿಸುತ್ತ ಬಂದಿದ್ದಾರೆ. ಮನೆಯಲ್ಲೊಂದು ಪುಟ್ಟ ದೇವರ ಮನೆ ಮಾಡಿ, ದೇವರ ಫೋಟೋ, ಮೂರ್ತಿಗಳನ್ನಿಟ್ಟು ಪೂಜೆ ಮಾಡ್ತಾರೆ. ಆದ್ರೆ ಕೆಲವೊಂದು ಮನೆಯಲ್ಲಿ ದೇವರ ಫೋಟೋ ಜೊತೆಗೆ ಹಿರಿಯರ ಫೋಟೋಗಳಿಗೂ ಪೂಜೆ ಮಾಡಲಾಗುತ್ತದೆ.
ದೇವರ ಮನೆಯಲ್ಲಿ ಹಿರಿಯರ ಫೋಟೋಗಳನ್ನು ಇಡುವುದು ಅಶುಭ ಎಂದು ಈಗಾಗಲೇ ಹೇಳಿದ್ದೇವೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಮೃತ ವ್ಯಕ್ತಿಗಳ ಫೋಟೋವನ್ನು ಇಡಬಾರದು. ಕುಟುಂಬಸ್ಥರಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ. ಮೃತಪಟ್ಟವರ ಫೋಟೋವನ್ನು ದೇವರ ಮನೆಯಲ್ಲಿಡಬೇಡಿ ಎನ್ನುತ್ತದೆ ವಾಸ್ತು ಶಾಸ್ತ್ರ.
ದೇವರ ಮನೆಯಲ್ಲಿ ಮೃತ ವ್ಯಕ್ತಿಗಳ ಫೋಟೋ ಇಟ್ಟರೆ ನೀವು ಅರಿಯದೆ ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೀರಿ ಎಂದೇ ಅರ್ಥ. ಕೆಲ ಸಿದ್ಧಾಂತದ ಪ್ರಕಾರ ಮೃತ ವ್ಯಕ್ತಿ ದೇವದೂತನಾಗಿ ಸ್ವರ್ಗದಲ್ಲಿರುತ್ತಾನೆ. ಆದ್ರೆ ಹಿಂದು ಧರ್ಮದ ಪ್ರಕಾರ ಮೃತ ವ್ಯಕ್ತಿಯ ದೇಹ ತೊರೆದು ಆತ್ಮ ಇನ್ನೊಂದು ದೇಹವನ್ನು ಸೇರುತ್ತದೆ. ಹಿಂದು ಧರ್ಮದ ಪ್ರಕಾರ ಶರೀರ ನಶ್ವರ. ಆತ್ಮ ಪವಿತ್ರ. ಹಾಗಾಗಿ ದೇಹವನ್ನು ಸಮಾಧಿ ಮಾಡಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ದೇವರ ಫೋಟೋಗಳನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದೇವರ ಮನೆ ದಿಕ್ಕು ಯಾವಾಗ್ಲೂ ಈಶಾನ್ಯಕ್ಕಿರಬೇಕು. ಹಾಗೆ ಹಿರಿಯರ ಫೋಟೋಗಳು ನೈರುತ್ಯ, ದಕ್ಷಿಣ ಅಥವಾ ಪಶ್ಚಿಮದಲ್ಲಿರಬೇಕು. ಸರಿಯಾದ ಜಾಗದಲ್ಲಿ ಫೋಟೋ ಇಡದಿದ್ದಲ್ಲಿ ಕುಟುಂಬದಲ್ಲಿ ನೋವು, ಬಿಕ್ಕಟ್ಟು, ದುಃಖವನ್ನು ಎದುರಿಸಬೇಕಾಗುತ್ತದೆ.