ದೇವರ ಮನೆ ಯಾವ ರೀತಿ ಇರಬೇಕು ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ನಿರ್ಲಕ್ಷಿಸುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೀಪಾವಳಿಯ ಸಿದ್ಧತೆ ಎಲ್ಲೆಡೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದೇವರ ಮನೆಯ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಬೇಕು.
ಮನೆಯ ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೊದಲು ದೇವರ ಮನೆಯನ್ನು ಶುಚಿ ಮಾಡಿ. ದೇವರ ಮನೆಯ ಸ್ಥಿತಿ ಚೆನ್ನಾಗಿದೆಯೇ, ದೇವರ ಮೂರ್ತಿಗಳಲ್ಲಿ ಯಾವುದಾದರೂ ಭಗ್ನವಾಗಿದೆಯೇ? ನೋಡಿಕೊಳ್ಳಿ.
ಈ ಸಂದರ್ಭದಲ್ಲಿ ಲಕ್ಷ್ಮಿ ಹಾಗೂ ಗಣೇಶನ ಚಿನ್ನ ಅಥವಾ ಬೆಳ್ಳಿಯ ಮೂರ್ತಿಯನ್ನು ಖರೀದಿಸಬಹುದು. ಪೂಜೆಗಾಗಿ ಚಿನ್ನ ಅಥವಾ ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿದರೆ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿಯ ಸಂದರ್ಭದಲ್ಲಿ ದೇವರ ಮನೆಯಲ್ಲಿ ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಲಕ್ಷ್ಮಿ ಗಣೇಶನ ಮೂರ್ತಿಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿಯು ಹರಡುತ್ತದೆ. ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ವಿಗ್ರಹಗಳನ್ನು ಖರೀದಿಸಲು ಬಯಸದಿದ್ದರೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸಬಹುದು. ಅವುಗಳನ್ನು ದೀಪಾವಳಿ ಪೂಜೆಯಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ಚಿನ್ನ ಮತ್ತು ಬೆಳ್ಳಿಯ ದೇವಾನುದೇವತೆಗಳ ವಿಗ್ರಹಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ತಾಮ್ರ ಅಥವಾ ಹಿತ್ತಾಳೆಯ ವಿಗ್ರಹಗಳು ಮತ್ತು ಪೂಜೆಯ ಪಾತ್ರೆಗಳನ್ನು ಖರೀದಿಸಬಹುದು. ಇದಲ್ಲದೇ ಜೇಡಿಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಕೂಡ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜಾ ಕೋಣೆಯಲ್ಲಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಸಹ ಇಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.