
ಕೇರಳದಲ್ಲಿ ಈ ಘಟನೆ ನಡೆದಿದ್ದು, ಭಾಗವಾರ್ ಸಿಂಗ್ ಮತ್ತು ಲೈಲಾ ಎಂಬ ದಂಪತಿ ತಮ್ಮ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಸಲುವಾಗಿ ಮಂತ್ರವಾದಿಯ ಮೊರೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಆತ ನರಬಲಿ ಕೊಟ್ಟರೆ ಸಮಸ್ಯೆ ಪರಿಹಾರವಾಗುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ದಂಪತಿ ಈ ಕೃತ್ಯ ಎಸಗಿದ್ದಾರೆ.
ಮೊದಲಿಗೆ ರೋಸಲಿನ್ ಎಂಬ 50 ವರ್ಷದ ಮಹಿಳೆಯನ್ನು ಅಪಹರಿಸಿದ್ದ ಈ ದಂಪತಿ, ಜೂನ್ ನಲ್ಲಿ ಆಕೆಯನ್ನು ಬಲಿ ಕೊಟ್ಟಿದ್ದರು. ಬಳಿಕ 52 ವರ್ಷದ ಪದ್ಮಾ ಎಂಬಾಕೆಯನ್ನು ಅಪಹರಿಸಿದ್ದು ಸೆಪ್ಟಂಬರ್ ನಲ್ಲಿ ಬಲಿ ಕೊಟ್ಟಿದ್ದರು. ಇವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧ ಭಾಗಗಳಲ್ಲಿ ಹೂತು ಹಾಕಿದ್ದರು ಎನ್ನಲಾಗಿದೆ.
ಮಹಿಳೆಯರ ನಾಪತ್ತೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಮಗೆ ಸಿಕ್ಕ ಮೊಬೈಲ್ ಸುಳಿವು ಆಧರಿಸಿ ಶಫಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದೀಗ ದಂಪತಿಯನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.