ಹುಟ್ಟು, ಸಾವು ಸಾಮಾನ್ಯ. ಹುಟ್ಟಿದ ಖುಷಿ ಸತ್ತಾಗ ಇರೋದಿಲ್ಲ. ಹುಟ್ಟಿದ ಖುಷಿಯನ್ನು ಮನುಷ್ಯ ಜೀವಂತವಾಗಿರುವವರೆಗೂ ಹುಟ್ಟು ಹಬ್ಬದ ರೂಪದಲ್ಲಿ ಆಚರಿಸುತ್ತಾನೆ. ಹಿಂದಿನ ಕಾಲದಲ್ಲಿ ಜನರಿಗೆ ಹುಟ್ಟಿದ ದಿನಾಂಕವೇ ನೆನಪಿರುತ್ತಿರಲಿಲ್ಲ.
ಕಾಲ ಬದಲಾದಂತೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಆದ್ರೆ ಹುಟ್ಟುಹಬ್ಬವನ್ನು ನಿಯಮದಂತೆ ಆಚರಿಸಿದ್ರೆ ದೇವಾನುದೇವತೆಗಳ ಕೃಪೆಗೆ ಪಾತ್ರರಾಗಬಹುದು.
ಜನ್ಮದಿನದ ಬೆಳಿಗ್ಗೆ ಬೇಗ ಎದ್ದು ಶುದ್ಧ ಜಲದಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಬೇಕು. ನಂತ್ರ ಕುಲದೇವರು ಅಥವಾ ದೇವಾನುದೇವತೆಗಳ ದರ್ಶನ ಮಾಡಿ ಪೂಜೆ ಮಾಡಬೇಕು. ಮನೆಯ ಹಿರಿಯ ವ್ಯಕ್ತಿಗಳಿಗೆ ನಮಿಸಿ ಅವರ ಆಶೀರ್ವಾದ ಪಡೆಯಬೇಕು.
ವರ್ಷದಷ್ಟೇ ದೀಪವನ್ನು ದೇವಸ್ಥಾನ ಅಥವಾ ಮನೆಯಲ್ಲಿ ಹಚ್ಚಿ. ಇದ್ರ ಜೊತೆಗೆ ಈ ವರ್ಷದ ಅಭಿವೃದ್ಧಿಗಾಗಿ ದೊಡ್ಡ ದೀಪವನ್ನು ಹಚ್ಚಿ. ನಂತ್ರ ಸಾಧ್ಯವಾದಷ್ಟು ಶ್ಲೋಕ ಪಠಣ, ಪೂಜೆ, ಹವನ, ಗಾಯನ, ದಾನ ಸೇರಿದಂತೆ ಯಾವುದೇ ಒಳ್ಳೆ ಕೆಲಸವನ್ನು ಮಾಡಿ.
ಹುಟ್ಟುಹಬ್ಬದ ದಿನ ಕೂದಲು ಕತ್ತರಿಸುವುದು ಅಥವಾ ಶೇವಿಂಗ್ ಮಾಡಬೇಡಿ.
ಮನೆಯಲ್ಲಿ ಮಾಡಿದ ಶುದ್ಧ ಸಾತ್ವಿಕ ಆಹಾರವನ್ನು ಸೇವನೆ ಮಾಡಿ.
ಸರಳ ಹಾಗೂ ಶಾಂತವಾಗಿ ದಿನವನ್ನು ಕಳೆಯಿರಿ.
ಆಲ್ಕೋಹಾಲ್, ತಂಬಾಕು, ಮಾಂಸಹಾರವನ್ನು ತ್ಯಜಿಸಿ.