ದೇವಾಲಯಕ್ಕೆ ಹೋದಾಗ ಎಲ್ಲರೂ ದೇವರಿಗೆ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ದೇವರ ಕೃಪೆ ನಿಮ್ಮ ಮೇಲಾಗುತ್ತದೆ ಎನ್ನುತ್ತಾರೆ. ಆದರೆ ಪ್ರದಕ್ಷಿಣೆಯನ್ನು ಹೇಗೆಂದರೆ ಹಾಗೇ ಮಾಡುವಂತಿಲ್ಲ. ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂಬುದು ತಿಳಿದಿರಬೇಕು. ಅದಕ್ಕೆ ಕೆಲವು ನಿಯಮಗಳಿವೆ. ಅದನ್ನು ಪಾಲಿಸಿ.
ಅರಳೀಮರದಲ್ಲಿ ದೇವರು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಅರಳೀಮರಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಿದರೆ ಉತ್ತಮ. ಇದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ.
ಶಿವನಿಗೆ 3 ಪ್ರದಕ್ಷಿಣೆ ಹಾಕಿದರೆ ದುರಾಲೋಚನೆ ದೂರವಾಗಿ ಕೆಟ್ಟ ಕನಸು ನಿವಾರಣೆಯಾಗುತ್ತದೆ.
ದೇವಿ ದುರ್ಗೆಗೆ 1 ಪ್ರದಕ್ಷಿಣೆಯನ್ನು ಹಾಕಿ. ಇದರಿಂದ ದೇವಿ ಕೃಪೆ ನಿಮ್ಮ ಮೇಲಾಗುತ್ತದೆ.
ಆಂಜನೇಯ ಮತ್ತು ಗಣೇಶನಿಗೆ 3 ಪ್ರದಕ್ಷಿಣೆ ಹಾಕಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.
ವಿಷ್ಣುವಿಗೆ 4 ಪ್ರದಕ್ಷಿಣೆ ಹಾಕಬೇಕು. ಇದರಿಂದ ನಮ್ಮ ಶಕ್ತಿ, ಧೈರ್ಯ ಹೆಚ್ಚಾಗುತ್ತದೆ.
ಸೂರ್ಯನಿಗೆ 7 ಬಾರಿ ಪ್ರದಕ್ಷಿಣೆ ಹಾಕಿ. ಇದರಿಂದ ಅನಾರೋಗ್ಯ ದೂರವಾಗುತ್ತದೆ.