ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ವಾರಗಳ ದಿನ ಪೂಜೆ ಮಾಡುವಾಗ ಸಾಮಾನ್ಯವಾಗಿ ಕಲಶ ಇಟ್ಟು ಪೂಜಿಸುವುದು ರೂಢಿ. ಕಲಶ ದೇವರ ಸಾಕ್ಷಾತ್ ರೂಪ ಎಂಬ ಭಾವನೆ ಇದೆ.
ಕಲಶದಲ್ಲಿ ನೀರು ತುಂಬಿಸಿ, ತೆಂಗಿನ ಕಾಯಿ ಇಡುವ ಮುನ್ನ ವೀಳ್ಯದೆಲೆ ಅಥವಾ ಮಾವಿನ ಎಲೆ ಇಟ್ಟು ನಂತರ ಕಲಶ ಸ್ಥಾಪಿಸುತ್ತಾರೆ. ಪೂಜೆಯ ನಂತರ ಕಲಶ ವಿಸರ್ಜನೆ ಮಾಡುವಾಗಲೂ ಕೆಲವು ನಿಯಮಗಳನ್ನು ಅನುಸರಿಸಲೆಬೇಕು.
ಕಲಶದ ನೀರು ಅತ್ಯಂತ ಪವಿತ್ರವಾದದ್ದು. ಆದ್ದರಿಂದ ಇದನ್ನು ಮನೆಯೊಳಗೆ ಎಲ್ಲೆಡೆ ಪ್ರೋಕ್ಷಿಸಿ ನಂತರ ತುಳಸಿ ಗಿಡಕ್ಕೆ ಮಿಕ್ಕ ನೀರನ್ನು ಸುರಿಯಬೇಕು.
ಕಲಶಕ್ಕೆ ಇಟ್ಟ ಎಲೆಗಳನ್ನು ಮಂಗಳವಾರ ಅಥವಾ ಶುಕ್ರವಾರ ವಿಸರ್ಜಿಸುವ ಹಾಗಿಲ್ಲ. ಅಷ್ಟೇ ಅಲ್ಲದೆ ಈ ಪವಿತ್ರ ಎಲೆಗಳನ್ನು ಎಲ್ಲೆಂದರಲ್ಲಿ ಬೇರೆ ಕಸದ ಜೊತೆಗೆ ಹಾಕಬಾರದು. ಮಂಗಳವಾರ ಅಥವಾ ಶುಕ್ರವಾರ ಹೊರತುಪಡಿಸಿ ಇದನ್ನು ತುಳಸಿ ಗಿಡಕ್ಕೆ ಹಾಕಬಹುದು.