ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ದೇವಿ-ದೇವರ ಬಗ್ಗೆ ಜಪ ಮಾಡುವ ವಿಧಾನವನ್ನೂ ಶಿವಪುರಾಣದಲ್ಲಿ ಹೇಳಲಾಗಿದೆ. ಒಂದು ವೇಳೆ ಈ ಕೆಳಗಿನ ಅಂಶಗಳನ್ನು ಅನುಸರಿಸದಿದ್ದಲ್ಲಿ ನೀವು ಮಾಡಿದ ಜಪ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಪುರಾಣದಲ್ಲಿ ಹೇಳಲಾಗಿದೆ.
ಜಪವನ್ನು ಮಾಡುವಾಗ ಸಂಪೂರ್ಣ ವಿಧಿ-ವಿಧಾನವನ್ನು ಅನುಸರಿಸಬೇಕು. ಎಲ್ಲೆಂದರಲ್ಲಿ, ಯಾವ ಸಮಯದಲ್ಲಾದರೂ ಜಪ ಮಾಡುವುದು ಯೋಗ್ಯವಲ್ಲ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ವಿಭೂತಿ ಇಟ್ಟು, ವಿಧಿ ವಿಧಾನದ ಮೂಲಕ ಜಪ ಮಾಡಬೇಕಾಗುತ್ತದೆ.
ಶ್ರದ್ಧೆ ಮುಖ್ಯ. ಶ್ರದ್ಧೆಯಿಂದ ಜಪ ಮಾಡಬೇಕಾಗುತ್ತದೆ. ಜಪ ಮಾಡುವಾಗ ಮನಸ್ಸು ಪವಿತ್ರವಾಗಿರಬೇಕು. ಶ್ರದ್ಧೆ ಹಾಗೂ ನಂಬಿಕೆಯಿಂದ ಜಪ ಮಾಡಿದ್ರೆ ದೇವರು ಭಕ್ತರ ಕೋರಿಕೆಯನ್ನು ಈಡೇರಿಸುತ್ತಾನೆ.
ಶಿವಪುರಾಣದಂತೆ ಶ್ರದ್ಧೆಯಿಂದ ಪೂಜೆ ಮಾಡಿದ ವ್ಯಕ್ತಿ ನಂತರ ಬಡವ ಅಥವಾ ಬ್ರಾಹ್ಮಣನಿಗೆ ದಕ್ಷಿಣೆ ಅಥವಾ ದಾನ ಮಾಡದೆ ಹೋದಲ್ಲಿ ಜಪ ವ್ಯರ್ಥವಾಗುತ್ತದೆ.
ಜಪ ಮಾಡುವ ಮುನ್ನ ಅದನ್ನು ಅರಿತಿರುವವರ ಬಳಿ, ಜಪದ ಮಹತ್ವ ಹಾಗೂ ವಿಧಿ – ವಿಧಾನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಂತರ ಜಪ ಶುರು ಮಾಡಬೇಕು.