ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಹೊಳೆನರಸೀಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ದೇವರಾಜೇಗೌಡ ಅಮಿತ್ ಶಾ ಆಡಿಸಿದಂತೆ ಆಡುವ ಆಟದ ಗೊಂಬೆ ಎನ್ನುವುದು ಸ್ವತಃ ದೇವರಾಜೇಗೌಡನಿಂದಲೇ ತಿಳಿದಿದೆ.
* ಅಮಿತ್ ಶಾ ಅಣತಿಯಂತೆ ಪೆನ್ ಡ್ರೈವ್ ಬಿಡುಗಡೆಯಾಯ್ತಾ ?
* ಜೆಡಿಎಸ್ ಪಕ್ಷವನ್ನು ಮುಳುಗಿಸಲು ಅಮಿತ್ ಶಾ ಅವರೇ ರೂಪಿಸಿದ ತಂತ್ರವೇ ?
* ಒಂದು ಪೆನ್ ಡ್ರೈವ್ ಇಟ್ಟುಕೊಂಡು ಎರಡು ಪಕ್ಷಗಳನ್ನು ಟಾರ್ಗೆಟ್ ಮಾಡುವ ಹುನ್ನಾರವೇ ?
ಪೆನ್ ಡ್ರೈವ್ ವಿಷಯವನ್ನು ಇಟ್ಟುಕೊಂಡು DK Shivakumar ಅವರನ್ನು ಜೈಲಿಗೆ ಹಾಕಿಸುವ ಹುನ್ನಾರ ನಡೆಸಿದ್ದಾರೆ ಎಂದರೆ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಬಗ್ಗೆ ಅದೆಷ್ಟು ಭಯವಿರಬಹುದು.
ದೇವರಾಜೇಗೌಡನ ಪ್ರತಿ ನಡೆ, ನುಡಿಯೂ ಅಮಿತ್ ಶಾ ನಿರ್ದೇಶನದಂತೆ ನಡೆಯುತ್ತಿದೆ ಎಂದರೆ ಇದೆಲ್ಲದರ ಮಾಸ್ಟರ್ ಮೈಂಡ್ ಸ್ವತಃ ಅಮಿತ್ ಶಾ ಅಲ್ಲವೇ ? ಎಂದು ಕಾಂಗ್ರೆಸ್ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಪ್ರಶ್ನಿಸಿದೆ.
https://twitter.com/INCKarnataka/status/1789202550425625030