ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರ ಪೂಜೆ, ಅರ್ಚನೆ, ಆರಾಧನೆ ನಡೆಯುತ್ತಿರುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡುವ ಜೊತೆಗೆ ದೇವಸ್ಥಾನಗಳಿಗೂ ನಾವು ಹೋಗ್ತಿರುತ್ತೇವೆ. ಮನಸ್ಸು ಏಕಾಗೃತೆ ಮತ್ತು ಭಕ್ತಿ ಹೆಚ್ಚಲು ದೇವಾಲಯದ ಗೋಡೆಗಳಿಗೆ ಹಚ್ಚುವ ಬಣ್ಣ ಕೂಡ ಮಹತ್ವ ಪಡೆಯುತ್ತದೆ.
ದೇವರ ಮನೆ ಯಾವಾಗಲೂ ಪೂರ್ವ ಅಥವಾ ಉತ್ತರಾಭಿಮುಖವಾಗಿದ್ರೆ ನೀವು ಉತ್ತಮ ಫಲವನ್ನು ಪಡೆಯುತ್ತೀರಿ.
ಮರದಿಂದ ಮಾಡಿದ ದೇವರ ಪೀಠ ತುಂಬಾ ಒಳ್ಳೆಯದು. ದೇವರ ಕೋಣೆ ಸುತ್ತ ಯಾವುದೆ ಕೊಳಕು ಇರಬಾರದು. ದೇವಾಲಯಕ್ಕೆ ಕಡು ನೀಲಿ ಬಣ್ಣವನ್ನು ಬಳಸಬೇಡಿ. ತಿಳಿ ಹಳದಿ ಅಥವಾ ಕಿತ್ತಳೆ ಬಣ್ಣದಿಂದ ಕೂಡಿದ್ರೆ ಮನೆ ಮನ ಶಾಂತಿಯಿಂದ ತುಂಬಿರುತ್ತೆ.
BIG NEWS: ಎಲ್ಲಾ ಸಭೆಗಳನ್ನು ರದ್ದುಗೊಳಿಸಿ ತೆರಳಿದ ಅಮಿತ್ ಶಾ; ಬಿಜೆಪಿ ಚಾಣಾಕ್ಷ್ಯನ ನಡೆ ನಿಗೂಢ
ದೇವರ ಮನೆಗೆ ಸಾಕಷ್ಟು ಗಾಳಿ ಬೆಳಕು ಬರುವಂತಿರಲಿ. ಮನೆ ದೇವಾಲಯದಲ್ಲಿ ಅನವಶ್ಯಕ ವಸ್ತುಗಳನ್ನು ಇಡಬೇಡಿ. ತಿಳಿ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ದೇವರಪೀಠಕ್ಕೆ ಬಳಸಿ. ಮುಖ್ಯವಾಗಿ ಗಣಪತಿ ಮತ್ತು ಮಹಾಲಕ್ಷ್ಮಿ ಫೋಟೋ ಅಥವಾ ಚಿತ್ರ ಇದ್ರೆ ಶುಭ. ನಿಮ್ಮ ಇಷ್ಟದ ಗುರುಗಳ ಚಿತ್ರ ಇರಲಿ. ಯಾವಾಗಲೂ ತಾಮ್ರದ ಗಂಗಾಪಾತ್ರೆ ದೇವರ ಮುಂದಿರಲಿ.
ದೇವಾಲಯದ ಸುತ್ತ ಯಾವುದೇ ಕೊಳಕು ಅಥವಾ ಚಪ್ಪಲಿ, ಬೂಟುಗಳನ್ನು ಇಡಬೇಡಿ. ಅಷ್ಟೇ ಅಲ್ಲ ಶೌಚಾಲಯ ಕೂಡ ದೂರವಿರಲಿ. ಭಜನಾ ಕೀರ್ತನೆಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಹಾಡಿ. ದೇವರ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಧೂಪ ಹಾಕಿ. ಪೂಜೆ ಮಾಡುವಾಗ, ಗುಲಾಬಿ ಅಥವಾ ತಿಳಿ ಹಳದಿ ಬಟ್ಟೆಗಳನ್ನು ಧರಿಸಿ ಪೂಜಿಸಿ. ಕೆಂಪು ಅಥವಾ ಹಳದಿ ಆಸನದ ಮೇಲೆ ಕುಳಿತು ಮಂತ್ರವನ್ನು ಪಠಿಸಿದ್ರೆ ಉತ್ತಮ.
ಏನೇ ತೊಂದ್ರೆ ಇರ್ಲಿ ಪ್ರತಿದಿನ ಬೆಳಿಗ್ಗೆ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ. ಪ್ರಗತಿಯ ಸಂಕೇತವಾದ ಹಸಿರು ಮಾವಿನ ಎಲೆಯನ್ನು ಪೂಜಾ ಸಮಯದಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಹಾಕಿ. ಇದ್ರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಕೂಡ ದೂರವಾಗುತ್ತೆ.