2021-22 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಪಡೆದಿರುವ ದೇಣಿಗೆ ವಿವರವನ್ನು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ ಬಿಡುಗಡೆ ಮಾಡಿದ್ದು, ಉಳಿದೆಲ್ಲ ಪಕ್ಷಗಳಿಗಿಂತ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಹರಿದು ಬಂದಿದೆ.
ಈ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಒಟ್ಟು 780.774 ಕೋಟಿ ರೂಪಾಯಿ ದೇಣಿಗೆ ಕೊಡಲಾಗಿದ್ದು, ಈ ಪೈಕಿ ಬಿಜೆಪಿಗೆ 614.63 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ.
ಇನ್ನುಳಿದಂತೆ ಕಾಂಗ್ರೆಸ್ ಗೆ 95.46 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದು, 2020-21 ರಲ್ಲೂ ಬಿಜೆಪಿ ದೇಣಿಗೆ ಸ್ವೀಕರಿಸಿದ ಪಕ್ಷಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿತ್ತು. ಆ ಅವಧಿಯಲ್ಲಿ ಬಿಜೆಪಿ 477.55 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿತ್ತು.